ರಾಯಚೂರು: ಸಾರಿಗೆ ಬಸ್ ಪಲ್ಟಿ : ಕಂಡಕ್ಟರ್ ಸಾವು , 20 ಪ್ರಯಾಣಿಕರಿಗೆ ಗಾಯ – vishwanews24

Featured, ರಾಜ್ಯ ನ್ಯೂಸ್

ರಾಯಚೂರು: ಸಾರಿಗೆ ಬಸ್ ಪಲ್ಟಿ : ಕಂಡಕ್ಟರ್ ಸಾವು , 20 ಪ್ರಯಾಣಿಕರಿಗೆ ಗಾಯ

ರಾಯಚೂರು: ಸಾರಿಗೆ ಬಸ್ ಪಲ್ಟಿಯಾಗಿ ಕಂಡಕ್ಟರ್ ಮೃತಪಟ್ಟು, 20 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಅಂಚೇಸುಗೂರು ಬಳಿ ನಡೆದಿದೆ.

ಮೃತರನ್ನು ಲಿಂಗಸುಗೂರು ತಾಲೂಕಿನ ಬಸವರಾಜ್ ( 36 ) ಎಂದು ಗುರುತಿಸಲಾಗಿದೆ.

ಅಂಜಳ ಗ್ರಾಮದಿಂದ ಅಂಚೇಸುಗೂರಿನ ಕೆನಾಲ್ ಸೇತುವೆ ದಾಟುವ ವೇಳೆ ಬಸ್ ಪಲ್ಟಿಯಾಗಿದೆ. ಬಸ್ ನಲ್ಲಿ 39 ಜನ ಪ್ರಯಾಣಿಕರಿದ್ದು, 20 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರು: ಹರಕೆ ನೇಮೋತ್ಸವ ವೇಳೆ ರಿಷಬ್ ಶೆಟ್ಟಿ ಮಡಿಲಲ್ಲಿ ಮಲಗಿದ್ದ ದೈವ ನರ್ತಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ – vishwanews24

ಬಸ್‌ ಚಾಲಕ ಗಂಭೀರ ಗಾಯಗೊಂಡಿದ್ದು, ರಾಯಚೂರಿನ ರಿಮ್ಸ್ ಗೆ ರವಾನೆ ಮಾಡಲಾಗಿದೆ. ಬಸ್ ಪಲ್ಟಿಯಾಗಿ ಕೆಲ ಹೊತ್ತಾದರೂ ಆಂಬ್ಯುಲೆನ್ಸ್ ಬಾರದ ಕಾರಣ ಟಂಟಂ, ಬೈಕ್ ಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಹಿಳಾ ನೌಕರರಿಗೆ ಋತುಚಕ್ರ ರಜೆ : ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ – vishwanews24

Leave a Reply