ರಾಷ್ಟ್ರ ದ್ರೋಹಿಗಳಿಗೆ ಈ ರಾಷ್ಟ್ರದಲ್ಲಿ ಜಾಗವಿಲ್ಲ : ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ – Vishwanews24
ಹೊಸದಿಲ್ಲಿ: ರಾಷ್ಟ್ರ ದ್ರೋಹಿಗಳಿಗೆ ಈ ರಾಷ್ಟ್ರದಲ್ಲಿ ಜಾಗವಿಲ್ಲ. ನನಗೆ ಯಾವಾಗಲೂ ದೇಶ ಮೊದಲು. ಪ್ರಾಮಾಣಿಕತೆಯೇ ತಮ್ಮ ಅತಿದೊಡ್ಡ ಸದ್ಗುಣ ಎಂದು ಪೂರ್ವ ದಿಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಗೌತಮ್ ಗಂಭೀರ್, ದಿಲ್ಲಿಯ ಜನತೆ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ. ನಾನು ದಿಲ್ಲಿಯನ್ನು ಪ್ಯಾರಿಸ್, ಲಂಡನ್, ವಾಷಿಂಗ್ಟನ್ ಅಥವಾ ಟೋಕಿಯೋದಷ್ಟು ಸುಂದರವಾಗಿಸುತ್ತೇನೆ ಎಂಬ ಭರವಸೆಗಳನ್ನು ನೀಡುವುದಿಲ್ಲ. ದಿಲ್ಲಿಯ ಗುರುತನ್ನು ಬದಲಾಯಿಸುವುದಿಲ್ಲ , ರಾಷ್ಟ್ರ ದ್ರೋಹಿಗಳಿಗೆ ಈ ರಾಷ್ಟ್ರದಲ್ಲಿ ಜಾಗವಿಲ್ಲ. ನನಗೆ ಯಾವಾಗಲೂ ದೇಶ ಮೊದಲು ಎಂದು ಹೇಳಿದ್ದಾರೆ.
ಗಂಭೀರ್ ಅವರು ಎರಡು ವೋಟರ್ ಐಡಿಗಳನ್ನು ಹೊಂದಿದ್ದು, ಇದು ಅಪರಾಧವಾಗಿದೆ. ಹಾಗಾಗಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಎಂದು ಪೂರ್ವ ದಿಲ್ಲಿ ಕ್ಷೇತ್ರದ ಆಪ್ ಅಭ್ಯರ್ಥಿ ಅತೀಶಿ ಆರೋಪಕ್ಕೆ ಪ್ರತಿಕ್ರಿಯಿಸಿದ ಗಂಭೀರ್, ಮತದಾರನಾದ ನಂತರ ರಾಜೇಂದ್ರನಗರದಿಂದ ಮತ ಚಲಾಯಿಸುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
