ರಾಹುಲ್​ ಗಾಂಧಿಯೇ ನಮ್ಮ ಪ್ರಧಾನಿ ಅಭ್ಯರ್ಥಿ: ಎಚ್​.ಡಿ. ದೇವೇಗೌಡ

Featured, ರಾಜ್ಯ ನ್ಯೂಸ್

ಹಾಸನ: ರಾಹುಲ್​ ಗಾಂಧಿಯೇ ನಮ್ಮ ಪ್ರಧಾನಿ ಅಭ್ಯರ್ಥಿ. ಎಲ್ಲರ ತೀರ್ಮಾನದ ನಂತರವೇ ಆಯ್ಕೆಯಾಗಿದ್ದು, ಈ ಬಗ್ಗೆ ಚರ್ಚೆಯೇ ಬೇಡ ಎಂಬ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಜತೆ ಮೈತ್ರಿ ಸಾಧ್ಯವಿಲ್ಲ ಎಂದರು. ರಾಹುಲ್ ಮಾನಸ ಸರೋವರ ಯಾತ್ರೆ ಒಂದು ಉತ್ತಮ ಕೆಲಸ. ಯಾತ್ರೆಗೆ ನಾನು ಹೋಗಬೇಕು ಅಂದುಕೊಂಡಿದ್ದೆ. ಸಿದ್ದರಾಮಯ್ಯ ವಿದೇಶ ಪ್ರವಾಸವೂ ಸುಖಮಯವಾಗಿರಲಿ ಎಂದು ಹೇಳಿದರು.

ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ವಿಚಾರ ಕೇಂದ್ರ ಜನಸಾಮಾನ್ಯರ ಮೇಲೆ ಕಷ್ಟ ಹೊರಿಸಿದೆ. ರೂಪಾಯಿ ಮೌಲ್ಯ ಈಗಿನಷ್ಟು ಕೆಳಮಟ್ಟಕ್ಕೆ ಬಂದಿರಲಿಲ್ಲ. ಇದು ಜನರ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಕೇಂದ್ರ ಸರ್ಕಾರ ಜಿಡಿಪಿ ಬಗ್ಗೆ ಮಾತಾಡುತ್ತೆ. ಕೇಂದ್ರವೇಕೆ ಒಂದು ಭಾಗದ ಹೊರೆ ಹೊರಬಾರದು? ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.