ರುಚಿಯಾದ ಬೀಟ್ ರೂಟ್ ಹಲ್ವಾ ಮಾಡುವ ವಿಧಾನ – Vishwanews24
ಮನೆಯಲ್ಲಿ ಹಲ್ವಾ ಮಾಡುವಾಗ ತಕ್ಷಣ ನೆನಪಿಗೆ ಬರುವುದು ಕ್ಯಾರೆಟ್ ಹಲ್ವಾ, ಕುಂಬಳಕಾಯಿ ಹಲ್ವಾ, ಆದರೆ ಬೀಟ್ ರೂಟ್ ನಿಂದಲೂ ಸವಿರುಚಿಯ ಹಲ್ವಾ ತಯಾರಿಸಬಹುದು ಗೊತ್ತಾ? ಈ ಬೀಟ್ ರೂಟ್ ಹಲ್ವಾವನ್ನು ಹೆಚ್ಚಿನ ಪರಿಶ್ರಮವಿಲ್ಲದೆ ತಯಾರಿಸಬಹುದು. ಮಕ್ಕಳಿಗಂತೂ ಇದರ ಬಣ್ಣ ಮತ್ತು ರುಚಿ ತುಂಬಾ ಇಷ್ಟವಾಗುವುದು.
ಬೇಕಾಗುವ ಸಾಮಾಗ್ರಿಗಳು :
- 2 ಬಟ್ಟಲು ಹಾಲು
- 4 ಬೀಟ್ ರೂಟ್
- ಅರ್ಧ ಬಟ್ಟಲು ಸಕ್ಕರೆ
- ಏಲಕ್ಕಿ ಪುಡಿ
- ತುಪ್ಪ
- ಗೋಡಂಬಿ
- ಬಾದಾಮಿ
- ಕೋವಾ
- ಹಾಲು
- ಒಣ ದ್ರಾಕ್ಷಿ
ಮಾಡುವ ವಿಧಾನ…
- ಮಾಡುವ ವಿಧಾನ: * ಬೀಟ್ ರೂಟ್ ನ ಸಿಪ್ಪೆ ಸುಲಿದು ಅದನ್ನು ತುರಿಯಿರಿ.
- ಬಾದಾಮಿಯನ್ನು ಬಿಸಿ ನೀರಿನಲ್ಲಿ 10 ನಿಮಿಷ ಹಾಕಿ ಅದರ ಸಿಪ್ಪೆ ಸುಲಿಯಿರಿ, ನಂತರ ಚಿಕ್ಕ-ಚಿಕ್ಕ ಪೀಸ್ ಮಾಡಿ.
- ಪ್ಯಾನ್ ಗೆ 1 ಚಮಚ ತುಪ್ಪ ಹಾಕಿ ಬಿಸಿ ಮಾಡಿ ಅದರಲ್ಲಿ ಗೋಡಂಬಿ ಹಾಕಿ 2-3 ನಿಮಿಷ ಫ್ರೈ ಮಾಡಿ ಬದಿಯಲ್ಲಿ ತೆಗೆದಿಡಿ.
- ನಂತರ ಗೋಡಂಬಿ ಫ್ರೈ ಮಾಡಿದ ಪ್ಯಾನ್ ಗೆ 2 ಚಮಚ ತುಪ್ಪ ಹಾಕಿ ಬಿಸಿ ಮಾಡಿ ಮಾಡಿ, ನಂತರ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. * ನಂತರ ಎರಡು ಕಪ್ ಹಾಲು ಮತ್ತು ಸಕ್ಕರೆ ಹಾಕಿ ಕಡಿಮೆ ಉರಿಯಲ್ಲಿ ಬೀಟ್ ರೂಟ್ ಬೆಂದು ಮೆತ್ತಗಾಗಿ, ಹಾಲು ಬತ್ತುವವರೆಗೆ ಬೇಯಿಸಿ, ಆಗಾಗ ಸೌಟ್ ನಿಂದ ತಿರುಗಿಸುತ್ತಾ ಬೇಯಿಸಬೇಕು, ಇಲ್ಲದಿದ್ದರೆ ಅಡಿ ಹಿಡಿಯುವುದು.
- ಈಗ ಏಲಕ್ಕಿ ಪುಡಿ ಹಾಕಿ ಉಳಿದ ತುಪ್ಪವನ್ನು ಸುರಿದು ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ, ಉರಿಯಿಂದ ಇಳಿಸಿ, ಗೋಡಂಬಿ ಬಾದಾಮಿಯಿಂದ ಅಲಂಕರಿಸಿ ತಣ್ಣಗಾಗಲು ಇಡಿ.
- ಬೇಕಾದರೆ khoaವನ್ನು ಮೇಲೆ ಹಾಕಬಹುದು. ಇಷ್ಟು ಮಾಡಿದರೆ ಸವಿರುಚಿಯ ಬೀಟ್ ರೂಟ್ ಹಲ್ವಾ ರೆಡಿ.
khoa ಮಾಡುವುದು ಹೇಗೆ? ಇದು ರೆಡಿ ಮೇಡ್ ಸಿಗುತ್ತದೆ, ಮಾಡುವುದಾದರೆ ದೊಡ್ಡ ಪಾತ್ರೆಗೆ 1 ಕಪ್ ಹಾಲು ಹಾಕಿ, ಹಾಲು ಗಟ್ಟಿಯಾಗುವವರೆಗೆ ಕಡಿಮೆ ಉರಿಯಲ್ಲಿ ಕುದಿಸಬೇಕು. (ಇದನ್ನು ಹಲ್ವಾದ ಮೇಲೆ ಹಾಕಿದರೆ ಹಲ್ವಾದ ರುಚಿ ಹೆಚ್ಚುವುದು).
