ರೇಣುಕಾಸ್ವಾಮಿ ಕೊಲೆ ಪ್ರಕರಣ: ಜಾಮೀನು ಪಡೆದ ಮೂವರು ಆರೋಪಿಗಳು  ಜೈಲಿನಿಂದ ಬಿಡುಗಡೆ – vishwanews24

Featured, ರಾಜ್ಯ ನ್ಯೂಸ್

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜಾಮೀನು ಪಡೆದ ಮೂವರು ಆರೋಪಿಗಳು  ಜೈಲಿನಿಂದ ಬಿಡುಗಡೆ

ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕ ಬಳಿಕವೂ ಬಿಡುಗಡೆಯಾಗದೇ ಪರದಾಡುತ್ತಿದ್ದ ಮೂವರು ಆರೋಪಿಗಳು ಇಂದು ತುಮಕೂರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಸೆ.23 ರಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಮೂವರು ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ಹಾಗೂ ನಿಖಿಲ್‌ಗೆ ಷರತ್ತುಬದ್ಧ ಜಾಮೀನು ದೊರೆತಿತ್ತು.ಎ-16 ಆರೋಪಿ ಕೇಶವಮೂರ್ತಿಗೆ ಹೈಕೋಟ್‌ನಿಂದ ಹಾಗೂ ಎ-15 ಆರೋಪಿ ಕಾರ್ತಿಕ್, ಎ-17 ಆರೋಪಿ ನಿಖಿಲ್‌ಗೆ 57ನೇ ಸಿಸಿಹೆಚ್ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಸಿಕ್ಕಿತ್ತು. ಕೋರ್ಟ್ 2 ಲಕ್ಷ ರೂ. ಹಣ ಹಾಗೂ ಇಬ್ಬರು ಶೂರಿಟಿದಾರರನ್ನ ಹೊಂದಿಸಲು ಆರೋಪಿಗಳ ಕುಟುಂಬಸ್ಥರ ಬಳಿ ಕೇಳಿದ್ದರು. ಆದರೆ ಜಾಮೀನು ಶ್ಯೂರಿಟಿಗೂ ಹಣವಿಲ್ಲದೇ ಆರೋಪಿಗಳ ಕುಟುಂಬಸ್ಥರು ಪರದಾಡುತ್ತಿದ್ದರು.

ಕಾಪು  : ಪಣಿಯೂರು-ಬೆಳಪು ರಸ್ತೆ ಅಗಲೀಕರಣ : ಸಂತ್ರಸ್ತರ ಸಭೆ – vishwanews24

ಕಳೆದ 9 ದಿನಗಳಿಂದ ಶ್ಯೂರಿಟಿದಾರರು ಸಿಗದೇ ಪರದಾಟ ನಡೆಸಿದ್ದ ಕುಟುಂಬಸ್ಥರಿಗೆ ಮಂಗಳವಾರ ಜಾಮೀನು ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಂಡಿದೆ.

Leave a Reply