ರೈತ ಬಾಂಧವರ ಅಭಿವೃದ್ಧಿಗಾಗಿ ಮತ್ತೊಮ್ಮೆ ಸಾಲ ಮನ್ನಾ ಆಗುವ ಆಶಯವಿದ್ದರೆ ಜೆ.ಡಿ.ಎಸ್. ಬೆಂಬಲಿಸಿ : ಎಚ್.ಡಿ. ಕುಮಾರಸ್ವಾಮಿ
ಬೇರೆ ಪಕ್ಷಗಳಂತೆ ಜಾತಿ- ಧರ್ಮದ ನಡುವೆ ವಿಷಬೀಜ ಬಿತ್ತಿ ಮತಪೆಟ್ಟಿಗೆ ತುಂಬಿಸುವ ಪಕ್ಷ ನಮ್ಮದಲ್ಲ..
ಸಮಸ್ತ ಬಡವರ ಅಭಿವೃದ್ಧಿಯೇ ನನ್ನ ಅಧಿಕಾರ ವ್ಯವಸ್ಥೆಯ ಮೂಲ ಮಂತ್ರ..
ರಟ್ಟೀಹಳ್ಳಿ : ಬಡವರು, ದೀನ ದಲಿತರು ಹಿಂದುಳಿದ ವರ್ಗದವರು ನಮ್ಮ ಪಕ್ಷದ ಜೀವಾಳವಾಗಿದ್ದು ಸಮಸ್ತ ಬಡವರ ಅಭಿವೃದ್ಧಿಯೇ ನನ್ನ ಅಧಿಕಾರ ವ್ಯವಸ್ಥೆಯ ಮೂಲ ಮಂತ್ರ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಹಾವೇರಿಗೆ ಜಿಲ್ಲೆಯಲ್ಲೇ 75 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ನಾನು ಅಧಿಕಾರಕ್ಕೆ ಬಂದ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದ ಕುಟುಂಬಗಳನ್ನು ಭೇಟಿ ನೀಡಿ ಸಾಂತ್ವನ ಹೇಳುವ ಮೂಲಕ ಪರಿಹಾರ ನೀಡುವ ಕಾರ್ಯ ಕೈಗೊಳ್ಳಲಾಗಿದೆ.
ನಾಡಿನ ಸಮಸ್ತ ರೈತ ಬಾಂಧವರ ಅಭಿವೃದ್ಧಿಗಾಗಿ ಮತ್ತೊಮ್ಮೆ ಸಾಲ ಮನ್ನಾ ಆಗುವ ಆಶಯವಿದ್ದರೆ ಜೆ.ಡಿ.ಎಸ್. ಬೆಂಬಲಿಸಿ. ಮುಂದಿನ ಉಜ್ವಲ ಕರ್ನಾಟಕದ ಭವಿಷ್ಯಕ್ಕಾಗಿ ಹಲವಾರು ಯೋಜನೆಗಳ ಆಶಯ ಹೊಂದಿದ್ದು, ಎಲ್.ಕೆ.ಜಿ ಯಿಂದ 12ನೇ ತರಗತಿಯ ವರೆಗೆ ಎಲ್ಲ ಜಾತಿಯ ಮಕ್ಕಳಿಗೂ ಉಚಿತ ಗುಣಾತ್ಮಕ ಶಿಕ್ಷಣ ದೊರಕಿಸುವದು. ನಾಡಿನ ಬಡಕುಟುಂಬದ ಜನರಿಗೆ ಆರೋಗ್ಯ ದೃಷ್ಟಿಯನ್ನಿಟ್ಟುಕೊಂಡು ರಾಜ್ಯದ ಪ್ರತಿ ಗ್ರಾಪಂನಲ್ಲಿ 30 ಬೆಡ್ನ ಆಸ್ಪತ್ರೆ ನಿರ್ಮಿಸುವ ಮೂಲಕ ಉಚಿತ ಆರೋಗ್ಯ ಸೇವೆ ನೀಡುವದು. ರೈತರಿಗಾಗಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವುದು. ಪ್ರತಿ ಕುಟುಂಬದ ಒಬ್ಬರಿಗೆ ಉದ್ಯೋಗ ನೀಡುವುದು, ಬೀದಿ ವ್ಯಾಪಾರಿಗಳಿಗೆ ಸಾಲ ನೀಡುವದು, ಋುಣಮುಕ್ತ ಕಾಯಿದೆ ಮೂಲಕ ಸರ್ವ ಜನಾಂಗದ ಅಭಿವೃದ್ಧಿ ನನ್ನ ಆಡಳಿತದ ಮೂಲ ಮಂತ್ರವಾಗಿದೆ ಎಂದರು.
ಬೇರೆ ಪಕ್ಷಗಳಂತೆ ಜಾತಿ- ಧರ್ಮದ ನಡುವೆ ವಿಷಬೀಜ ಬಿತ್ತಿ ಮತಪೆಟ್ಟಿಗೆ ತುಂಬಿಸುವ ಪಕ್ಷ ನಮ್ಮದಲ್ಲ. ಸಮಾಜ ಒಡೆದು ಅಧಿಕಾರ ನಡೆಸುವುದು ಆ ಪಕ್ಷಗಳ ಕೆಲಸ ಎಂದು ಕಾಂಗ್ರೆಸ್ ಮತ್ತು ಬಿಜೆಪಿ(BJP) ಪಕ್ಷದ ನೀತಿಯನ್ನು ಟೀಕಿಸಿದರು.
ಕೇವಲ ಮತ ಪಡೆಯೋಕೆ ಇಲ್ಲಿ ಹಲವು ಸಮಸ್ಯೆ ಹುಟ್ಟು ಹಾಕುತ್ತಿದ್ದಾರೆ. ಇದಕ್ಕೆ ಮತದಾರರು ಅವಕಾಶ ನೀಡಬಾರದು. ನನ್ ಹತ್ತಿರ ಶ್ರೀಮಂತರು ಬರುವುದಿಲ್ಲ. ಗ್ರಾಮೀಣ ಪ್ರದೇಶದ ಜನ ಮಾತ್ರ ಬರುತ್ತಾರೆ. ನಾನು ಎಂದಿಗೂ ಗ್ರಾಮೀಣ ಜನರೊಂದಿಗೆ ಬೆರೆತಿರುವವನು. ತಾವು ತೋರಿಸೋ ಪ್ರೀತಿಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡ್ತೀನಿ ಅಂತಾನೆ, ಎಲ್ಲಿದೆ ದುಡ್ಡು ಅಂತ ವಿಡಂಬನೆ ಮಾಡಿದರು. ಬೇರೆ ಪಕ್ಷದವರೇ ನಮ್ಮ ಜೊತೆ ಸರ್ಕಾರ ಮಾಡಲು ಬಂದಾಗ ನಾನು ರೈತರ ಹಿತದೃಷ್ಟಿಯಿಂದ ಒಪ್ಪಿಕೊಂಡು ಸಿಎಂ ಆದೆ. 14 ತಿಂಗಳಲ್ಲಿ .25000 ಕೋಟಿ ಹೊಂದಿಸಿ ರೈತರ ಸಾಲ ಮನ್ನಾ ಮಾಡಿದೆ. ಹಿರೇಕೆರೂರು ತಾಲೂಕಿನಲ್ಲಿ ರೈತರ .100 ಕೋಟಿಗೂ ಅಧಿಕ ಸಾಲಮನ್ನಾ ಆಗಿದೆ ಎಂದರು.
ಕಾಂಗ್ರೆಸ್ ಎಂದಿಗೂ ಜಾತಿ, ಧರ್ಮದ ಜೊತೆಯಲ್ಲಿ ಆಟವಾಡಿದ ಪಕ್ಷವಲ್ಲ; ಪ್ರೀತಿ- ಪ್ರೇಮದ ಜೊತೆ ಬೆರೆತ ಪಕ್ಷ
