ರೈತರ ಹಿತ ಚಿಂತನೆ ಮಾಡದ ಕೆಲವು ಸಂಘಟನೆಗಳು, ಪ್ರತಿಪಕ್ಷಗಳು ರೈತ ಮಸೂದೆಯನ್ನು ಉದ್ದೇಶ ಪೂರ್ವಕವಾಗಿಯೇ ವಿರೋಧಿಸುತ್ತಿವೆ : ಬಿ ವೈ ರಾಘವೇಂದ್ರ -Vishwanews24
ರೈತರ ಹಿತ ಚಿಂತನೆ ಮಾಡದ ಕೆಲವು ಸಂಘಟನೆಗಳು, ಪ್ರತಿಪಕ್ಷಗಳು ರೈತ ಮಸೂದೆಯನ್ನು ಉದ್ದೇಶ ಪೂರ್ವಕವಾಗಿಯೇ ವಿರೋಧಿಸುತ್ತಿವೆ : ಬಿ ವೈ ರಾಘವೇಂದ್ರ -Vishwanews24
ಕುಂದಾಪುರ: ರೈತರ ಹಿತ ಚಿಂತನೆ ಮಾಡದ ಕೆಲವು ಸಂಘಟನೆಗಳು, ಪ್ರತಿಪಕ್ಷಗಳು ರೈತ ಮಸೂದೆಯನ್ನು ಉದ್ದೇಶಪೂರ್ವಕವಾಗಿಯೇ ವಿರೋಧಿಸುತ್ತಿವೆ ಎಂದು ಬೈಂದೂರು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಹೇಳಿದರು.
ಅವರು ಮಂಗಳವಾರ ಸಿದ್ದಾಪುರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರೈತರು ದೇಶದ ಬೆನ್ನೆಲುಬು, ಕೇಂದ್ರ ಸರಕಾರವೂ ರೈತರ ಪರವಾಗಿದೆ ಆದರೆ ಕೆಲವೊಂದು ವ್ಯಕ್ತಿಗಳೂ ರೈತರ ವೇಷ ಧರಿಸಿ ಉದ್ದೇಷಪೂರಕವಾಗಿಯೇ ರೈತ ಮಸೂದಯನ್ನು ವಿರೋಧಿಸಲಾಗುತ್ತಿದ್ದು, ಇದು ರೈತರ ಹಿತ ಕಾಯದ ವಿರೋಧ ಪಕ್ಷಗಳ ಷಡ್ಯಂತ್ರವಾಗಿದ್ದು, ಸಾಕಷ್ಟು ಚರ್ಚಿಸಿ ರೈತ ಮಸೂದೆಯನ್ನು ಜಾರಿಗೆ ತರಲಾಗಿದೆ ಎಂದರು
ಗ್ರಾಮ ಪಂಚಾಯತ್ ಮತದಾನದಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದ ಅವರು ಪರಿಸರಸ್ನೇಹಿಯಾಗಿ ಕೊಲ್ಲೂರು ರೋಪ್ವೇ ಯನ್ನು ನಿರ್ಮಿಸುತ್ತೇವೆ ಎಂದರು.
