ರೈತರ ಹೋರಾಟ : ಸಾವು-ನೋವುಗಳು ಸಂಭವಿಸುತ್ತಿರುವುದು ನಿಜಕ್ಕೂ ದುಖದ ಸಂಗತಿ : ಸಚಿವ ಯು.ಟಿ.ಖಾದರ್ -Vishwanews24

Featured, ರಾಜ್ಯ ನ್ಯೂಸ್

ರೈತರ ಹೋರಾಟ : ಸಾವು-ನೋವುಗಳು ಸಂಭವಿಸುತ್ತಿರುವುದು ನಿಜಕ್ಕೂ ದುಖದ ಸಂಗತಿ : ಸಚಿವ ಯು.ಟಿ.ಖಾದರ್ -Vishwanews24

ಬೆಂಗಳೂರು : ದೆಹಲಿಯ ಬೀದಿ ಬೀದಿಗಳಲ್ಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಸಾವು-ನೋವುಗಳು ಸಂಭವಿಸುತ್ತಿರುವುದು ನಿಜಕ್ಕೂ ದುಖದ ಸಂಗತಿ. ಈ ಬಗ್ಗೆ ಬಿಜೆಪಿಗರು ಮೌನವಾಗಿರುವುದೇಕೆ.? ಸಮಾಜ ನಿರ್ಲಕ್ಷಿಸಿದಾಗ, ಅಧಃಪತನ ಆರಂಭವಾಗಲಿದೆ ಎಂಬುದಾಗಿ ಮಾಜಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಈ ಕುರಿತಂತೆ ಮಾಜಿ ಸಚಿವ ಯು.ಟಿ.ಖಾದರ್ ಅವರು ಟ್ವಿಟ್ ಮಾಡಿದ್ದು, ರೈತರು ದೆಹಲಿಯ ಬೀದಿ ಬೀದಿಗಳಲ್ಲಿ ಹೋರಾಟ ಮಾಡುತ್ತಿದ್ದಾರೆ.ಸಾವು ನೋವುಗಳು ಸಂಭವಿಸುತ್ತಿದ್ದು, ನಿಜಕ್ಕೂ ದುಃಖಕರ.ಅಂದು ಮಾತೆತ್ತಿದರೆ ಮನಮೋಹನ್ ಸಿಂಗರನ್ನು ಮೌನಿಬಾಬಾ ಎಂದು ಟೀಕಿಸುತ್ತಿದ್ದ ಬಿಜೆಪಿಗರು ಇಂದು ಮೌನಿಯಾಗಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.

ಸಮಾಜವನ್ನ ನಿರ್ಲಕ್ಷಿಸಿದಾಗ ಅಧಪತನ ಆರಂಭ ಎಂಬ ಸ್ವಾಮಿ ವಿವೇಕಾನಂದರ ಮಾತನ್ನ ಈ ಸಂದರ್ಭದಲ್ಲಿ ನೆನಪಿಸಲು ಬಯಸುವೆ ಎಂದಿದ್ದಾರೆ.

ದಾಂಧಲೆ ಮಾಡುವುದು ರೈತ, ದೇಶಭಕ್ತ ಮಾಡುವ ಕಾರ್ಯವಲ್ಲ, ರೈತರ ಹೆಸರಿನಲ್ಲಿ ರಾಷ್ಟ್ರಘಾತಕ ಶಕ್ತಿಗಳ ಕೃತ್ಯ ನಡೆದಿದೆ : ನಳೀನ್ ಕುಮಾರ್ ಕಟೀಲ್ -Vishwanews24