ಲಾಕ್ ಡೌನ್ ವೇಳೆ ಸಾಮಾಜಿಕ ಜಾಲತಾಣ ಇನ್’ಸ್ಟಾಗ್ರಾಮ್ ಮೂಲಕ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಸಂಪಾದನೆ: vishwanews24
ಮುಂಬೈ: ಕೋವಿಡ್-19 ಲಾಕ್ ಡೌನ್ ನಿಂದ ಕ್ರಿಕೆಟ್ ಜಗತ್ತು ಸ್ತಬ್ಧವಾಗಿದೆ. ಕಳೆದೆರಡು ತಿಂಗಳಿನಿಂದ ಯಾವುದೇ ಕ್ರಿಕೆಟ್ ಪಂದ್ಯಗಳಿಲ್ಲ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲಾಕ್ ಡೌನ್ ಸಮಯದಲ್ಲಿ ತಮ್ಮ ಮುಂಬೈನ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಆದರೆ ಮನೆಯಲ್ಲಿಯೇ ಕುಳಿತು ಕೊಹ್ಲಿ ಕೋಟ್ಯಾಂತರ ರೂ. ಸಂಪಾದಿಸಿದ್ದಾರೆ.
ಹೌದು, ಸಾಮಾಜಿಕ ಜಾಲತಾಣ ಇನ್’ಸ್ಟಾಗ್ರಾಮ್ ಮೂಲಕ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಸಂಪಾದನೆ ಮಾಡಿದ್ದಾರೆ. ಕೇವಲ ಮೂರು ಪ್ರಾಯೋಜಿತ ಪೋಸ್ಟ್ ನಿಂದ 3,60,76,933.83 ರೂ ಗಳಿಸಿದ್ದಾರೆ ಕ್ಯಾಪ್ಟನ್ ಕೊಹ್ಲಿ.
‘ಅಟೈನ್’ ಮಾಡಿರುವ ವರದಿಯಲ್ಲಿ ಈ ವಿಚಾರ ಬಹಿರಂಗವಾಗಿದ್ದು, ಮಾರ್ಚ್ 12ರಿಂದ ಮೇ 4ರ ಅವಧಿಯಲ್ಲಿ ಕೊಹ್ಲಿ ಇಷ್ಟೊಂದು ಸಂಪಾದನೆ ಮಾಡಿದ್ದಾರೆ.
ಫುಟ್ ಬಾಲ್ ತಾರೆ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಲಿಯೋನಲ್ ಮೆಸ್ಸಿ ಸ್ಥಾನ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿ ನೇಯ್ಮರ್ ಇದ್ದಾರೆ. ಕೊಹ್ಲಿಗೆ ಆರನೇ ಸ್ಥಾನ.

