ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಬಳಕೆ : ದೇಶದಲ್ಲಿಯೇ ದ್ವಿತೀಯ ಸ್ಥಾನ ಪಡೆದ ಸಂಸದ ಬಿ.ವೈ.ರಾಘವೇಂದ್ರ – Vishwanews24
ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಬಳಕೆ : ದೇಶದಲ್ಲಿಯೇ ದ್ವಿತೀಯ ಸ್ಥಾನ ಪಡೆದ ಸಂಸದ ಬಿ.ವೈ.ರಾಘವೇಂದ್ರ – Vishwanews24
ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಬಳಕೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ದೇಶದಲ್ಲಿಯೇ ದ್ವಿತೀಯ ಸ್ಥಾನ ಪಡೆದಿದ್ದಾರೆ.
2019-20ರ ಸಾಲಿಗೆ ಸಂಬಂಧಿಸಿದಂತೆ 5 ಕೋಟಿ ರೂ ಅನುದಾನ ಹಾಗೂ 10 ರಿಂದ 15ನೇ ಲೋಕಸಭೆವರೆಗೆ ಬಳಕೆಯಾಗದೇ ಇದ್ದ 4.40 ಕೋಟಿ ರೂ ಅನುದಾನ ಸೇರಿದಂತೆ 9.40 ಕೋಟಿ ರೂ.ಗಳಲ್ಲಿ ಈಗಾಗಲೇ 9 ಕೋಟಿ ರೂ ಬಳಕೆ ಮಾಡಿದ್ದಾರೆ.
ಅನುದಾನ ಬಳಕೆ ವಿವರ:
- ಸಾರ್ವಜನಿಕ ಬಸ್ ಶೆಲ್ಟರ್ ಗಳು, ಹೈಮಾಸ್ಟ್ ಲೈಟ್, ಶಾಲಾ ಕೊಠಡಿ ಮತ್ತು ಸಾರ್ವಜನಿಕ ಸಮುದಾಯ ಭವನಕ್ಕೆ 4.70 ಕೋಟಿ ರೂ. ನೀಡಿದ್ದಾರೆ.
- ರಸ್ತೆ ನಿರ್ಮಾಣಕ್ಕೆ 2.93 ಕೋಟಿ ರೂ ಅನುದಾನ
- ಕೊರೊನಾ ನಿರ್ವಹಣೆಗೆ, ಆರೋಗ್ಯ ಇಲಾಖೆಗೆ ಆ್ಯಂಬುಲೆನ್ಸ್ ಮತ್ತು ಡಯಾಲಿಸಿಸ್ ಯಂತ್ರ ಅಳವಡಿಕೆಗೆ 8.50 ಲಕ್ಷ ರೂ.
- ಕುಡಿಯುವ ನೀರಿನ ಘಟಕಕ್ಕೆ 42 ಲಕ್ಷ ರೂ. ಹಾಗು ಅಂಗವಿಕಲರಿಗೆ ತ್ರಿಚಕ್ರ ವಾಹನ ಹೀಗೆ ಅನೇಕ ಉಪಯುಕ್ತ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಉಳಿದ ಅನುದಾನ ಬಳಕೆ ಮಾಡಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದ ಹರಡುವಿಕೆಯ ಹಿನ್ನೆಲೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2020-21 ಹಾಗೂ 2021-22ರ ಎರಡು ವರ್ಷಗಳ ಸಂಸದರ ನಿಧಿಯನ್ನು ಕೋವಿಡ್ ಸಂಕಷ್ಟದ ಆರ್ಥಿಕ ಪರಿಸ್ಥಿತಿ ನಿರ್ವಹಣೆಗೆ ನೀಡಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈ ಗೊಂಡಿದ್ದು, 2021-22ನೇ ಸಾಲಿನಲ್ಲಿ ಸ್ಥಗಿತಗೊಂಡಿದ್ದ ಸಂಸದರ ನಿಧಿಯಲ್ಲಿ 2 ಕೋಟಿ ರೂ. ಬಿಡುಗಡೆ ಮಾಡಿದೆ.
ಹೀಗಾಗಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರಅವರು ಪ್ರಧಾನಿ ಶ್ರೀ ನರೇಂದ್ರ ಮೋದಿ, ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
