ಲೋಕಸಭಾ ಚುನಾನಣೆ : ಸತತ 12 ಬಾರಿ ಗೆದ್ದು ಬೀಗಿದ ಖರ್ಗೆಯನ್ನು ಸೋಲಿಸಲು ಬಿಜೆಪಿಯಿಂದ ಉಮೇಶ್​ ಜಾಧವ್ ಕಣಕ್ಕೆ..-Vishwanews24

Featured, ರಾಜ್ಯ ನ್ಯೂಸ್

ಕಲಬುರಗಿ : ಸೋನಿಯಾ ಗಾಂಧಿ ಆತ್ಯಪ್ತರಾಗಿರುವ ಮಲ್ಲಿಕಾರ್ಜನ ಖರ್ಗ ಸೋಲಿಸಲು ಪಣತೊಟ್ಟಿದೆ. ಬಿಜೆಪಿ ಅಪರೇಷನ್​ ಕಮಲ ಮಾಡುವ ಮೂಲಕ ಉಮೇಶ್​ ಜಾಧವ್​ ಅವರನ್ನೇ ಖರ್ಗೆ ವಿರುದ್ಧ ಕಣಕ್ಕೆ ಇಳಿಸಿರುವ ಬಿಜೆಪಿ ಸಿದ್ಧವಾಗಿದ್ದು, ಈ ಮೂಲಕ ಚುನಾವಣೆ ರಣಕಹಳೆ ಮೊಳಗಿಸಿದೆ.

ಸತತ 12 ಬಾರಿ ಗೆಲ್ಲುವ ಮೂಲಕ ಸೋಲಿಲ್ಲದ ಸರದಾರನನಾಗಿರುವ ಖರ್ಗೆ ಸೋಲಿಸುವುದು ಸುಲಭದ ಮಾತಲ್ಲ.  ಸಂಸತ್ತಿನಲ್ಲಿ ತಮ್ಮ ವಿರುದ್ಧ ಅನೇಕ ಬಾರಿ ಗುಡುಗಿರುವ ಖರ್ಗೆ ಅವರಿಗೆ ಸೋಲಿನ ರುಚಿ ಖುದ್ದು ಮೋದಿಯೇ ಆಸಕ್ತಿವಹಿಸಿದ್ದಾರೆ. ಕೈ​ ಪಾಳೆಯದ ದೊಡ್ಡ ನಾಯಕನನ್ನೇ ಗುರಿಯಾಗಿಸಿಕೊಳ್ಳುವ ಮೂಲಕ ಕಾಂಗ್ರೆಸ್​ಗೆ ಭೀತಿ ಹುಟ್ಟಿಸಲು ಮುಂದಾಗಿರುವ ಮೋದಿ ಇದಕ್ಕಾಗಿ ಕ್ಷೇತ್ರದ ಉಸ್ತುವಾರಿಯನ್ನು ಕೇಂದ್ರ ಸಚಿವ ರಾಜನಾಥ್​ ಸಿಂಗ್​ಗೆ ನೀಡಿದ್ದಾರೆ . ಗೃಹ ಸಚಿವರು ಕೂಡ ಯಾವುದೇ  ಅಬ್ಬರ ಮಾಡದೇ ಖರ್ಗೆ ವಿರುದ್ಧ ಕಾರ್ಯರೂಪಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಜಿಲ್ಲೆಯಲ್ಲಿರುವ ಅವರ ವಿರೋಧಿಗಳ್ನು ಒಟ್ಟುಗೂಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ..

ಈ ಬಾರಿ ಸಂಸತ್ತಿನಲ್ಲಿ ಖರ್ಗೆಯ ಭಾಷಣ ಕೊನೆಯಾಗ ಬೇಕು. ಈ ಮೂಲಕ ಕಾಂಗ್ರೆಸ್​ಗೆ ಭಾರೀ ಹೊಡೆತ ನೀಡಬೇಕು ಎಂದು ಬಿಜೆಪಿ ಸಿದ್ಧತೆ ನಡೆಸಿದೆ. ಲೋಕಸಭಾ ಚುನಾವಣೆಗೆ ಖರ್ಗೆ ಕ್ಷೇತ್ರದಲ್ಲಿಯೇ ಬೃಹತ್​ ಸಮಾವೇಶ ಹಮ್ಮಿಕೊಂಡಿರುವ ಮೂಲಕ ಈಗಾಗಲೇ ಪರೋಕ್ಷವಾಗಿ ಖರ್ಗೆ ವಿರುದ್ಧ ಗುಡುಗಿದ್ದಾರೆ. ಖರ್ಗೆ ವಿರುದ್ಧ ಅನುಕಂಪದಂತಹ, ಯಾವುದೇ ಸೂತ್ರಗಳು ಫಲಿಸದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ.

ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿರುವ ನಾಯಕರಾದ ಬಾಬುರಾವ್​ ಚಿಂಚನಸೂರು, ಮಾಲೀಕಯ್ಯ ಗುತ್ತೇದಾರ್​ ಕೂಡ ಖರ್ಗೆ ಸೋಲಿಸಲು ಶಪಥಮಾಡಿದ್ದಾರೆ. ಈಗ ಉಮೇಶ್​ ಜಾಧವ್​ ನೇರವಾಗಿ ಖರ್ಗೆ ವಿರುದ್ಧ ಸೆಡ್ಡುಹೊಡೆಯಲು ಸಜ್ಜಾಗಿದ್ದಾರೆ. ಸ್ಥಳೀಯ ನಾಯಕರ ಜೊತೆಗೆ ರಾಷ್ಟ್ರೀಯ ನಾಯಕರು ಕೂಡ ಈಗ ಕೈ ಜೋಡಿಸಿದ್ದು, ಖರ್ಗೆ ಸೋಲಿಗೆ ಭಾರೀ ರಣತಂತ್ರವೇ ಹೂಡಿದ್ದಾರೆ.