ಲೋಕಸಭಾ ಚುನಾವಣೆ ಕರ್ನಾಟಕ ಬಿಜೆಪಿಯ ಮೊದಲ ಪಟ್ಟಿ ರೆಡಿ – ದಕ-ಉಡುಪಿ ಚಿಕ್ಕಮಗಳೂರು ಎರಡನೇ ಪಟ್ಟಿಗೆ..?? Vishwanews24
ಲೋಕಸಭಾ ಚುನಾವಣೆ ಕರ್ನಾಟಕ ಬಿಜೆಪಿಯ ಮೊದಲ ಪಟ್ಟಿ ರೆಡಿ – ದಕ-ಉಡುಪಿ ಚಿಕ್ಕಮಗಳೂರು ಎರಡನೇ ಪಟ್ಟಿಗೆ..??
ಬೆಂಗಳೂರು : ಲೋಕಸಭಾ ಚುನಾವಣೆಗೆ ದಿನ ಹತ್ತಿರ ಬರುತ್ತಿದ್ದಂತೆ ಕರ್ನಾಟಕ ರಾಜ್ಯದ ಮೊದಲ ಸುತ್ತಿನ ಅಭ್ಯರ್ಥಿಗಳ ಪಟ್ಟಿ ಸಿದ್ದಗೊಂಡಿರುವ ಮಾಹಿತಿ ಹೊರಬಿದ್ದಿದೆ.
ಬಿಎಸ್.ಯಡಿಯೂರಪ್ಪ ಹಾಗೂ ತಂಡ ರೆಡಿ ಮಾಡಿರುವ ಪಟ್ಟಿ ಬುಧವಾರ ದೆಹಲಿ ಅಂಗಳಕ್ಕೆ ಹೋಗಲಿದ್ದು ಶುಕ್ರವಾರದೊಳಗೆ ಫೈನಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸುಮಾರು 14 ಲೋಕಸಭಾ ಕ್ಷೇತ್ರದ ಪಟ್ಟಿ ರೆಡಿಯಾಗಿದ್ದು ಇನ್ನುಳಿದ ಪಟ್ಟಿಯಲ್ಲಿ ಜೆಡಿಎಸ್ ಪಾಲು ಎಷ್ಟಿದೆಂಬುದು ಸ್ಪಷ್ಟವಾಗಲಿದೆಂಬ ಮಾಹಿತಿ ಜೆಡಿಎಸ್ ಮೂಲದಿಂದ ಸ್ಪೋಟಗೊಂಡಿದೆ.
ದೆಹಲಿ ಅಂಗಳದಲ್ಲಿ ರಾಜ್ಯ ರೆಡಿ ಮಾಡಿರುವ ಪಟ್ಟಿಯ ಬದಲಾವಣೆ ಅಥವಾ ಸಂಘದ ಸೇರ್ಪಡೆ ಹಾಗೂ ಡಿಲಿಟ್ ಆಗುವ ಸಾಧ್ಯತೆಯಿದೆ ಮತ್ತು ಸರ್ವೆ ಮಾಹಿತಿ ಆಧಾರದ ಮೇರೆಗೆ ಅದೇ ಫೈನಲಾಗಬಹುದೆಂಬುದು ಒಂದು ಲೆಕ್ಕಾಚಾರ ನಡೆಯುತ್ತಿದೆ.
ಕಾಂಗ್ರೇಸ್ ಫೆಬ್ರವರಿ ಅಂತ್ಯದಲ್ಲಿ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಮಾಹಿತಿ ಹೊರ ಬಿದ್ದ ಕೂಡಲೇ ಬಿಜೆಪಿಯ ಈ ಸ್ಪೋಟಕ ಮಾಹಿತಿ ವಿಶ್ವನ್ಯೂಸ್24 ಗೆ ದೆಹಲಿ ಮೂಲದಿಂದ ಲಭ್ಯವಾಗಿದೆ.
ಮೊದಲ ಪಟ್ಟಿಯಲ್ಲಿ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಚಿಕ್ಕಮಗಳೂರು ಸೇರಿದಂತೆ ಒಟ್ಟು 14 ಕ್ಷೇತ್ರಗಳು ಬಾಕಿ ಉಳಿದಂತಾಗಿದೆ.
ಗೊಂದಲವಿಲ್ಲದ ಮತ್ತು ಆಕಾಂಕ್ಷಿಗಳ ತೀವ್ರ ಪೈಪೋಟಿಯಿಲ್ಲದ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಇದಾಗಿದೆ.
ಬ್ಯುರೋ ರಿಪೋರ್ಟ್ ವಿಶ್ವನ್ಯೂಸ್24 ,ಬೆಂಗಳೂರು
