ಲೋಕಸಭಾ ಚುನಾವಣೆ ಫಲಿತಾಂಶದಿಂದ ದಿಗ್ಭ್ರಮೆಯಾಗಿದೆ; ಈಗ ಎಲ್ಲವೂ ಯಡಿಯೂರಪ್ಪ ಕೈಯಲ್ಲಿದೆ : ಡಿ.ಕೆ ಶಿವಕುಮಾರ್​ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್​ಗೆ ಕೇವಲ ಒಂದೇ ಸ್ಥಾನ ಬಂದಿದೆ. ಹೀಗಾಗಿ ನನಗೆ ಸೋದರ ಗೆದ್ದ ಸಂತಸವೂ ಇಲ್ಲ ಅಂತಾ ಸಚಿವ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣೆ ಫಲಿತಾಂಶದಿಂದ ದಿಗ್ಭ್ರಮೆಯಾಗಿದೆ. ಎಲ್ಲಿ ತಪ್ಪಾಗಿದೆ ಅಂತಲೇ ಗೊತ್ತಾಗುತ್ತಿಲ್ಲ. ರಾಜ್ಯದಲ್ಲಿ ಖರ್ಗೆ, ದೇವೇಗೌಡರಂತವರೇ ಸೋತಿದ್ದು ಆತಂಕವಾಗಿದೆ. ಗೆಲುವು ಸಾಧಿಸಿರುವ ಒಬ್ಬ ಸುರೇಶ್ ಲೋಕಸಭೆಯಲ್ಲಿ ಏನು ಮಾಡಲು ಸಾಧ್ಯ ಅಂತಾ ಹೇಳಿದರು.

ಕಾಂಗ್ರೆಸ್​-ಜೆಡಿಎಸ್ ನಡುವೆ ಮೈತ್ರಿ ಧರ್ಮ ಪಾಲನೆ ಆಗದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಬಾಯಿಗೆ ಬೀಗ ಹಾಕಿಕೊಳ್ಳಲು ಹೇಳಿದ್ದಾರೆ. ಹೀಗಾಗಿ ನಾನು ಯಾರ ವಿರುದ್ಧವೂ ಈಗ ಮಾತನಾಡಲ್ಲ. ಇದೀಗ ಎಲ್ಲವೂ ಬಿ.ಎಸ್ ಯಡಿಯೂರಪ್ಪ ಕೈಯಲ್ಲೇ ಇದೆ ಎಂದರು.