ಲೋಕಸಭಾ ಚುನಾವಣೆ: ಸೊರಕೆಯವರಿಗೆ ಟಿಕೆಟ್ ನೀಡಿದರೆ ಮುಸ್ಲೀಮರು ಬೆಂಬಲಿಸುವುದಿಲ್ಲ : ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಅಶ್ರಪ್
ಮಂಗಳೂರು, : ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಧ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ಇಲ್ಲ ಎಂಬ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿಕೆಗೆ ಮುಸ್ಲಿಂ ಸಮುದಾಯ ಆಕ್ರೋಶಗೊಂಡಿದೆ.
ಮುಂದಿನ ಲೋಕಸಭೆ ಚುನಾವಣೆಗೆ ದ.ಕ. ಹಾಗೂ ಉಡುಪಿ ಜಿಲ್ಲೆಯಿಂದ ಆಕಾಂಕ್ಷಿಯಾಗಿರುವ ಸೊರಕೆಯವರಿಗೆ ಪಕ್ಷ ಟಿಕೆಟ್ ನೀಡಬಾರದೆಂದು ಮಂಗಳೂರಿನಲ್ಲಿ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಅಶ್ರಪ್ ಆಗ್ರಹಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ವಿನಯ ಕುಮಾರ್ ಸೊರಕೆ ಯವರನ್ನು ಕಣಕ್ಕೆ ಇಳಿಸಿದರೆ ಅವರನ್ನು ಬೆಂಬಲಿಸದಿರಲು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲೀಂ ಒಕ್ಕೂಟ ನಿರ್ಧರಿಸಿದ್ದು, ಹಲವು ಅಚ್ಚರಿಗಳಿಗೆ ಕಾರಣವಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನಯ ಕುಮಾರ್ ಸೊರಕೆ ಬದಲು ಯಾವುದೇ ವ್ಯಕ್ತಿಯನ್ನು ಲೋಕಸಭೆ ಚುನಾವಣಾ ಸ್ಪರ್ಧೆಗೆ ಆಯ್ಕೆ ಮಾಡಿ. ಬೇರೆ ಯಾರನ್ನೂ ಕೂಡ ನಾವು ವಿರೋಧಿಸುವುದಿಲ್ಲ. ಆದರೆ ಸೊರಕೆಯವರಿಗೆ ಟಿಕೆಟ್ ನೀಡುವುದಕ್ಕೆ ನಮ್ಮ ವಿರೋಧವಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ದಕ್ಷಿಣ ಕನ್ನಡ ಮುಸ್ಲೀಂ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಅಶ್ರಫ್ ಅವರು ವಿನಯ ಕುಮಾರ್ ಸೊರಕೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ದಿಂದ ಸ್ಪರ್ಧಿಸಲು ಪ್ರಾತಿನಿಧ್ಯ ಅಥವಾ ಅಭ್ಯರ್ಥಿ ತನ ನೀಡಿದ್ದೇ ಆದಲ್ಲಿ , ದ.ಕ.ಜಿಲ್ಲೆಯ ಸರ್ವ ಅಲ್ಪ ಸಂಖ್ಯಾತ ಮುಸ್ಲಿಮ್ ಸಮುದಾಯದ ಪ್ರತಿ ಮತದಾರರು ಈ ಅಭ್ಯರ್ಥಿ ಗೆ ಮತ ಚಲಾಯಿಸುವ ತಮ್ಮ ನಿರ್ಧಾರವನ್ನು ಖಂಡಿತ ವಾಗಿಯು ಪುನರ್ ವಿಮರ್ಶಿಸುತ್ತದೆ ,
ಒಂದೊಮ್ಮೆ ಸೊರಕೆಯವರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ತೀವ್ರ ಸ್ವರೂಪದ ಹೋರಾಟ ಮಾಡಲಾಗುವುದು. ಅಲ್ಲದೆ ಸೊರಕೆ ವಿರುದ್ಧ ಸಮುದಾಯದಿಂದ ಪರ್ಯಾಯ ಅಭ್ಯರ್ಥಿಯನ್ನು ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

