ವಂಚನೆ ಪ್ರಕರಣ: ಚೈತ್ರಾ ಕುಂದಾಪುರ ಕೋರ್ಟ್ಗೆ ಹಾಜರು ; ಮುಂದಿನ ವಿಚಾರಣೆ ಜ.13ಕ್ಕೆ ಮುಂದೂಡಿಕೆ – vishwanews24
ವಂಚನೆ ಪ್ರಕರಣ:ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಕೋರ್ಟ್ಗೆ ಹಾಜರು ; ಮುಂದಿನ ವಿಚಾರಣೆ ಜ.13ಕ್ಕೆ ಮುಂದೂಡಿಕೆ
‘ಬಿಗ್ ಬಾಸ್ ಕನ್ನಡ 11’ರ ಶೋನಿಂದ ಚೈತ್ರಾ ಕುಂದಾಪುರ ಹೊರಬಂದಿದ್ದಾರೆ. ವಂಚನೆ ಕೇಸ್ ಹಿನ್ನೆಲೆ ಇಂದು (ಡಿ.3) ಎಸಿಎಂಎಂ ಕೋರ್ಟ್ ಮುಂದೆ ಚೈತ್ರಾ ಹಾಜರಾಗಿದ್ದಾರೆ.
ಎಂಎಲ್ಎ ಟಿಕೆಟ್ ಕೊಡಿಸೋದಾಗಿ 5 ಕೋಟಿ ರೂ. ವಂಚಿಸಿರುವ ಆರೋಪ ಎದುರಿಸುತ್ತಿರುವ ಚೈತ್ರಾ ಬಿಗ್ ಬಾಸ್ನಿಂದ ಹೊರಬಂದು ಎಸಿಎಂಎಂ ನ್ಯಾಯಾಲಯದ ಮುಂದೆ ಅಟೆಂಡ್ ಆಗಿದ್ದಾರೆ. ಚೈತ್ರಾ, ಶ್ರೀಕಾಂತ್ ಸೇರಿದಂತೆ ಮೂವರು ಕೋಟ್ಗೆ ಬಂದಿದ್ದಾರೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು 2025ರ ಜ.13ಕ್ಕೆ ಮುಂದಿನ ವಿಚಾರಣೆಗೆ ದಿನಾಂಕ ಸೂಚಿಸಿದ್ದಾರೆ.
