ವಂಚನೆ ಪ್ರಕರಣ : ನಾನು ಖಂಡಿತವಾಗಿಯೂ ಪಕ್ಷಕ್ಕೆ ೮ ಕೋಟಿ ರೂ.ಗಳನ್ನು ವಂಚಿಸಿಲ್ಲ : ಸಂಸದೆ ರಮ್ಯಾ – Vishwanews24  

Featured, ರಾಜ್ಯ ನ್ಯೂಸ್

ನಾನು ಓಡಿಹೋಗಲಿಲ್ಲ, ವೈಯಕ್ತಿಕ ಕಾರಣಗಳಿಗಾಗಿ ನಾನು ರಾಜೀನಾಮೆ ನೀಡಿದ್ದೇನೆ..

ಬೆಂಗಳೂರು: ಕಾಂಗ್ರೆಸ್‌ಗೆ ಎಂಟು ಕೋಟಿ ರೂ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ಮೇಲೆ ಕೇಳಿ ಬರುತ್ತಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ನಟಿ, ಮಾಜಿ ಸಂಸದೆ ರಮ್ಯ ಅವರು ಸ್ಪಷ್ಟೀಕರಣ ವನ್ನು ಟ್ವಿಟರ್‌ನಲ್ಲಿ ಹೇಳಿದ್ದಾರೆ.

ನಾನು ರಾಜೀನಾಮೆ ನೀಡಿದ ನಂತರ, ‘ಅವರು ಕಾಂಗ್ರೆಸ್ಸಿಗೆ 8 ಕೋಟಿ ವಂಚಿಸಿ ಓಡಿಹೋದರು’ ಎಂದು ನನ್ನ ವಿಶ್ವಾಸಾರ್ಹತೆಯನ್ನು ನಾಶಪಡಿಸುವ ಪ್ರಯತ್ನದಲ್ಲಿ ಕನ್ನಡ ಸುದ್ದಿವಾಹಿನಿಗಳಲ್ಲಿ ಪ್ರಸಾರ ಮಾಡಲಾಯಿತು . ನಾನು ಓಡಿಹೋಗಲಿಲ್ಲ. ವೈಯಕ್ತಿಕ ಕಾರಣಗಳಿಗಾಗಿ ನಾನು ರಾಜೀನಾಮೆ ನೀಡಿದ್ದೇನೆ. ನಾನು ಖಂಡಿತವಾಗಿಯೂ ಪಕ್ಷಕ್ಕೆ ೮ ಕೋಟಿ ರೂ.ಗಳನ್ನು ವಂಚಿಸಿಲ್ಲ. ನನ್ನ ತಪ್ಪು ಮೌನವಾಗಿರುವುದು ಅವರು ಹೇಳಿದ್ದಾರೆ.

Leave a Reply