ವಂದೇ ಮಾತರಂ ಗೀತೆ ಹಾಡದವರಿಗೆ  ಈ ದೇಶದಲ್ಲಿ ಬದುಕುವ ಯಾವುದೇ ಹಕ್ಕಿಲ್ಲ ;ಇಂತವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು : ಬಿಜೆಪಿ ಶಾಸಕ ಸುರೇಂದ್ರ ಸಿಂಗ್​ -Vishwanews24

Featured, ರಾಷ್ಟ್ರ ನ್ಯೂಸ್

ಉತ್ತರಪ್ರದೇಶ,: ಭಾರತದಲ್ಲಿದ್ದು ವಂದೇ ಮಾತರಂ ಗೀತೆ ಹಾಡದವರಿಗೆ  ಈ ದೇಶದಲ್ಲಿ ಬದುಕುವ ಯಾವುದೇ ಹಕ್ಕು ಇಲ್ಲ. ಇಂತವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು  ಉತ್ತರ ಪ್ರದೇಶದ  ಬಿಜೆಪಿ ಶಾಸಕ ಸುರೇಂದ್ರ ಸಿಂಗ್​   ಹೇಳಿಕೆ ನೀಡಿದ್ದಾರೆ.

ಈಗ ವಂದೇ ಮಾತರಂ ಗೀತೆ ಹಾಡದವರಿಗೆ ಭಾರತದಲ್ಲಿ ವಾಸಿಸಲು ಹಕ್ಕಿರುವುದಿಲ್ಲ. ಅವರನ್ನು ಪಾಕಿಸ್ತಾನಕ್ಕೆ ಕಳಿಸಬೇಕು ಎಂದು ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದಾರೆ.

ವಂದೇ ಮಾತರಂ ಗೀತೆ ಹಾಡುವುದು ಒಂದು ಭಾವನಾತ್ಮಕ ವಿಷಯ. ಭಾರತದಲ್ಲಿ ವಾಸವಾಗಿದ್ದೀರಿ ಎಂದಾದಮೇಲೆ ವಂದೇ ಮಾತರಂ ಹಾಡಲೇಬೇಕು. ಇದು ಸಂಸ್ಕೃತವಾಗಿದ್ದರೂ ಉರ್ದುವಿಗೂ ಭಾಷಾಂತರವಾಗಿದೆ. ಯಾರು ಈ ಗೀತೆಯನ್ನು ಹಾಡಲು ಆಸಕ್ತಿ ತೋರಿಸುವುದಿಲ್ಲವೋ, ಅವರು ಭಾರತದಲ್ಲಿ ವಾಸಿಸಲು ಯೋಗ್ಯರಲ್ಲ. ಇದಕ್ಕೆ ಸಂಬಂಧಪಟ್ಟಂತೆ ಕ್ರಮ ಕೈಗೊಳ್ಳುವ ಅಧಿಕಾರ ನನಗೆ ಕೊಟ್ಟರೆ, ಅಂತಹವರನ್ನು ಒಂದೇ ವಾರದಲ್ಲಿ ಪಾಸ್​ಪೋರ್ಟ್​ ಮಾಡಿಸಿ ಪಾಕಿಸ್ತಾನಕ್ಕೆ ಕಳಿಸುತ್ತೇನೆ ಎಂದು ಹೇಳಿದ್ದಾರೆ.