ವಕ್ಫ್ ಬೋರ್ಡ್ ಉಪಾಧ್ಯಕ್ಷ ಗುಲಾಮ್ ಮಹಮ್ಮದ್ ಗೆ ಕೊರೊನಾ ಪಾಸಿಟಿವ್ -Vishwanews24
ಉಡುಪಿ: ಕಾಂಗ್ರೆಸ್ ಮುಖಂಡ ಗುಲಾಮ್ ಮಹಮ್ಮದ್ ಗೆ ಕೊರೊನಾ ಪಾಸಿಟಿವ್ -Vishwanews24
ಹೆಜಮಾಡಿ: ವಕ್ಫ್ ಬೋರ್ಡ್ ಉಪಾಧ್ಯಕ್ಷ , ಕಾಂಗ್ರೆಸ್ ಮುಖಂಡ ಗುಲಾಮ್ ಮಹಮ್ಮದ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲವು ದಿನಗಳಿಂದ ಜ್ವರ ಇದ್ದ ಕಾರಣ ಅವರು ಗಂಟಲ ಸ್ರಾವ ಪರೀಕ್ಷೆ ಮಾಡಿಸಿದ್ದರು. ಇದೀಗ ವರದಿ ಬಂದಿದ್ದು, ಕೊರೊನಾ ಇರುವುದು ದೃಢಗೊಂಡಿದೆ.
ಸದ್ಯ, ಹೆಜಮಾಡಿಯಲ್ಲಿರುವ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗುಲಾಮ್ ಮಹಮ್ಮದ್ , ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಆರೋಗ್ಯವಾಗಿದ್ದಾರೆ.
