ವಯನಾಡ್ ದುರಂತ: ಸಂತ್ರಸ್ತರ ನೆರವಿಗೆ ಮಲಬಾರ್ ಗ್ರೂಪ್ 3 ಕೋಟಿ ರೂ. ನೆರವು – vishwanews24
ವಯನಾಡ್ ದುರಂತ: ಸಂತ್ರಸ್ತರ ನೆರವಿಗೆ ಮಲಬಾರ್ ಗ್ರೂಪ್ 3 ಕೋಟಿ ರೂ. ನೆರವು
ಕೋಝಿಕ್ಕೋಡ್: ವಯನಾಡ್ ಭೂಕುಸಿತದ ಸಂತ್ರಸ್ತರ ನೆರವಿಗೆ ಮಲಬಾರ್ ಗ್ರೂಪ್ 3 ಕೋಟಿ ರೂಪಾಯಿಗಳನ್ನು ನೀಡಲಿದೆ ಎಂದು ಅಧ್ಯಕ್ಷ ಎಂ.ಪಿ.ಅಹ್ಮದ್ ಘೋಷಿಸಿದರು.
ಮಲಬಾರ್ ಗ್ರೂಪ್ ಸ್ಥಳಾಂತರಗೊಂಡವರಿಗೆ ತಕ್ಷಣವೇ ಆಹಾರ, ಔಷಧ ಮತ್ತು ವಸತಿ ಸಹಾಯವನ್ನು ನೀಡುತ್ತದೆ.
ಕೇರಳ ಕಂಡ ಅತ್ಯಂತ ಭೀಕರ ವಿಪತ್ತಿನ ಸಂತ್ರಸ್ತರ ನೆರವಿಗೆ ಎಲ್ಲ ದಾನಿಗಳು ಮುಂದೆ ಬರುತ್ತಾರೆ ಎಂದು ಹೇಳಿದರು. ವಯನಾಡಿನ ಪುತ್ತುಮಲ ದುರಂತದಲ್ಲಿ ಮನೆ ಕಳೆದುಕೊಂಡ 15 ಕುಟುಂಬಗಳಿಗೆ ಮಲಬಾರ್ ಗ್ರೂಪ್ ಮನೆ ಒದಗಿಸಿದೆ.
