ವಾಕ್ ವಿತ್ ಕಮಿಷನರ್: ಮಂಗಳೂರಿನ ಹಂಪನಕಟ್ಟೆಯಲ್ಲಿ ಹೋಟೆಲ್ ಪರಿಶೀಲನೆ – vishwanews24
ವಾಕ್ ವಿತ್ ಕಮಿಷನರ್: ಮಂಗಳೂರಿನ ಹಂಪನಕಟ್ಟೆಯಲ್ಲಿ ಹೋಟೆಲ್ ಪರಿಶೀಲನೆ..
ಟ್ರೇಡ್ ಲೈಸೆನ್ಸ್ ಹಾಗೂ ಸ್ವಚ್ಛತೆ ಬಗ್ಗೆ ಅಧಿಕಾರಿಗಳಿಗೆ ಸೂಚನೆ
ಫುಟ್ಪಾತ್ ಒತ್ತುವರಿ ತೆರವಿಗೆ 7 ದಿನಗಳ ಗಡುವು
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಅವರು ‘ವಾಕ್ ವಿತ್ ಕಮಿಷನರ್’ ಕಾರ್ಯಕ್ರಮದ ಮೂಲಕ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ರಸ್ತೆ, ಫುಟ್ಪಾತ್ ಒತ್ತುವರಿ ಹಾಗೂ ಮಳಿಗೆಗಳ ಟ್ರೇಡ್ ಲೈಸೆನ್ಸ್ ಸೇರಿದಂತೆ ವಿವಿಧ ವಿಚಾರಗಳ ಕುರಿತು ಪರಿಶೀಲನೆ ನಡೆಸಿದರು. ಕರ್ನಾಟಕಸರ್ಕಾರ ಯೋಜನೆಗಳು
ಹಂಪನಕಟ್ಟೆ ಬಳಿ ಪರಿಶೀಲನೆ ನಡೆಸಿದ ವೇಳೆ ಕಾಮತ್ ಹೋಟೆಲ್ನ ಟ್ರೇಡ್ ಲೈಸೆನ್ಸ್ ಪರಿಶೀಲಿಸಲಾಯಿತು. ಟ್ರೇಡ್ ಲೈಸೆನ್ಸ್ ವರ್ಗಾವಣೆ ಮಾಡದೇ ಹೋಟೆಲ್ ನಡೆಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಮಾಲಕರಿಗೆ ನೋಟಿಸ್ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.
ಮಂಗಳೂರು : ಎಂಡಿಎಂಎ ಮಾರಾಟಕ್ಕೆ ಯತ್ನ ; ಆರೋಪಿ ಬಂಧನ – vishwanews24
ಈ ವೇಳೆ ಹೋಟೆಲ್ನ ಅಡುಗೆ ಕೋಣೆಯನ್ನೂ ಪರಿಶೀಲಿಸಿದ ಆಯುಕ್ತರು, ಸ್ವಚ್ಛತೆಯ ಕೊರತೆ ಹಾಗೂ ಫ್ರಿಡ್ಜ್ನಲ್ಲಿ ಉಳಿದ ಆಹಾರ ಪದಾರ್ಥಗಳು ಕಂಡುಬಂದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಂಡು ನೋಟಿಸ್ ನೀಡುವಂತೆ ಸೂಚಿಸಿದರು.
ನಗರದ ಎಲ್ಲಾ ಮಳಿಗೆಗಳ ಟ್ರೇಡ್ ಲೈಸೆನ್ಸ್ಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಆಯುಕ್ತ ರಾಹುಲ್ ರತ್ನಂ ಪಾಂಡೆ ಸೂಚನೆ ನೀಡಿದರು.
‘ವಾಕ್ ವಿತ್ ಕಮಿಷನರ್’ ಕಾರ್ಯಕ್ರಮದ ಸಂದರ್ಭದಲ್ಲಿ ನಗರದ ಹಲವು ಮಳಿಗೆಗಳು ಫುಟ್ಪಾತ್ ಒತ್ತುವರಿ ಮಾಡಿಕೊಂಡಿರುವುದು ಆಯುಕ್ತರ ಗಮನಕ್ಕೆ ಬಂದಿದೆ.
ಹಂಪನಕಟ್ಟೆ, ಕೆಬಿ ಕಟ್ಟೆ, ಲೇಡಿಗೋಷನ್ ರಸ್ತೆ ಹಾಗೂ ಕಾರ್ಸ್ಟ್ರೀಟ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಂಡುಬಂದಿರುವ ಫುಟ್ಪಾತ್ ಒತ್ತುವರಿಯನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಆಯುಕ್ತರು, 7 ದಿನಗಳೊಳಗೆ ಒತ್ತುವರಿ ತೆರವುಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ.
