ವಾಮದಪದವು ಸರಕಾರಿ ಹಾಸ್ಟೇಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ : ಪ್ರೇಮ ವೈಫಲ್ಯ ಶಂಕೆ!

ದಕ್ಷಿಣ ಕನ್ನಡ

ಪುಂಜಾಲಕಟ್ಟೆ : ಇಲ್ಲಿನ ಠಾಣಾ ವ್ಯಾಪ್ತಿಯ ವಾಮದಪದವಿನಲ್ಲಿರುವ ಸರಕಾರಿ ಹಾಸ್ಟೇಲ್‌ನಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಸಕಲೇಶ್‌ಪುರ ನಿವಾಸಿ ಚಂದ್ರಶೇಖರ(19) ಎಂದು ಗುರುತಿಸಲಾಗಿದೆ. ಚಂದ್ರಶೇಖರ ವಾಮದಪದವಿನಲ್ಲಿ ಸರಕಾರಿ ಕಾಲೇಜಿನ ಬಿ.ಕಾಮ್ ವಿದ್ಯಾರ್ಥಿಯಾಗಿದ್ದು, ಇಲ್ಲಿನ ಸರಕಾರಿ ಹಾಸ್ಟೇಲ್‌ನಲ್ಲಿ ವಾಸವಿದ್ದರು ಎನ್ನಲಾಗಿದೆ. ಇಂದು ಇದೇ ಹಾಸ್ಟೇಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆಗೆ ಕಾರಣ ಪ್ರೇಮ ವೈಫಲ್ಯ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಇನ್ಸ್‌ಫೆಕ್ಟರ್ ಸಂದೇಶ್ ಪಿ.ಜಿ, ಪುಂಜಾಲಕಟ್ಟೆ ಠಾಣಾ ಸಬ್ ಇನ್ಸ್‌ಫೆಕ್ಟರ್ ಸುದರ್ಶನ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು, ಪುಂಜಾಲಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.