ವಾಯುಪಡೆಗೆ ದೇಶದ ಮೊದಲ ಮಹಿಳಾ ವೈಮಾನಿಕ ಇಂಜಿನಿಯರಾಗಿ ದಾಖಲೆ ನಿರ್ಮಿಸಿದ ಹಿನಾ ಜೈಸ್ವಾಲ್ – Vishwanews24
ಬೆಂಗಳೂರು: ದೇಶದ ಮೊದಲ ಮಹಿಳಾ ವೈಮಾನಿಕ ಇಂಜಿನಿಯರ್ ಆಗಿ ಚಂಡಿಗಡದ ಹಿನಾ ಜೈಸ್ವಾಲ್ ಆಯ್ಕೆಯಾಗಿ ದಾಖಲೆ ನಿರ್ಮಿಸಿದ್ದಾರೆ.ಚಂಡಿಗಡದವರಾದ ಹಿನಾ ಜೈಸ್ವಾಲ್, ಇಂದು ಯಲಹಂಕ ಹೊರ ವಲಯದ ವಾಯುಪಡೆ ನಿಲ್ದಾಣದ 112ನೇ ಹೆಲಿಕಾಪ್ಟರ್ ಘಟಕದಲ್ಲಿ ತಮ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ದೇಶದ ಪ್ರಥಮ ಮಹಿಳಾ ಇಂಜಿನಿಯರ್ ಆಗಿ ಆಯ್ಕೆಗೊಂಡರು.
ಭಾರತೀಯ ವಾಯು ಸೇನೆಯು ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ವೈಮಾನಿಕ ಎಂಜಿನಿಯರ್ ಅನ್ನು ನೇಮಕ ಮಾಡಿಕೊಂಡಿದೆ. ಈ ಮೂಲಕ ಇಲ್ಲಿಯ ವರೆಗೆ ಪುರುಷರಿಗೆ ಮಾತ್ರವೇ ಸೀಮಿತ ಎಂಬಂತಿದ್ದ ಸಂಪ್ರದಾಯವನ್ನು ಫ್ಲೈಟ್ ಲೆಫ್ಟಿನೆಂಟ್ ಹೀನಾ ಜೈಸ್ವಾಲ್ ಅವರು ಮುರಿದಿದ್ದಾರೆ.
2015ರ ಜನವರಿ 5ರಂದು ಭಾರತೀಯ ವಾಯುಪಡೆಯ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರತಿಷ್ಠಿತ ಫ್ಲೈಟ್ ಇಂಜಿನಿಯರ್ ತರಬೇತಿಗೆ ಆಯ್ಕೆಯಾಗಿದ್ದ ಹಿನಾ, ಇದಕ್ಕೂ ಮುನ್ನ ವಿಮಾನ ಕ್ಷಿಪಣಿ ಪಡೆಯ ಅಗ್ನಿಶಾಮಕ ದಳ ಮತ್ತು ಬ್ಯಾಟರಿಯ ಕಮಾಂಡರ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
Indian Air Force inducts Flight Lieutenant Hina Jaiswal as first woman flight engineer. She hails from Chandigarh&has completed her Bachelor of Engineering degree from Panjab University. As a Flight Engineer,she would subsequently be posted to operational helicopter units of IAF. pic.twitter.com/w6qtTyKVgC
— ANI (@ANI) February 15, 2019
ವಿಮಾನ ಅಥವಾ ಹೆಲಿಕಾಪ್ಟರ್ಗಳಲ್ಲಿರುವ ಸಿಬ್ಬಂದಿಯಲ್ಲಿ ಫ್ಲೈಟ್ ಎಂಜಿನಿಯರ್ ಕೂಡ ಒಬ್ಬರಾಗಿರುತ್ತಾರೆ. ವಿಮಾನಗಳನ್ನು ನಿರ್ವಹಿಸಲು ಮತ್ತು ಅದರ ಸಂಕೀರ್ಣ ವ್ಯವಸ್ಥೆಯನ್ನು ನಿಭಾಯಿಸಲು ವಿಶೇಷ ಕೌಶಲ ಅಗತ್ಯ. ಇಷ್ಟು ದಿನ ಈ ಹುದ್ದೆ ಪುರುಷರಿಗಷ್ಟೇ ಮೀಸಲು ಎಂಬಂತಾಗಿತ್ತು. ಸದ್ಯ ಫ್ಲೈಟ್ ಎಂಜಿನಿಯರ್ ಆಗಿ ನೇಮಕವಾಗಿರುವ ಹೀನಾ ಸಿಯಾಚಿನ್ನ ಅತಿ ಎತ್ತರದ ಹಿಮ ಶ್ರೇಣಿಗಳಲ್ಲಿ ಮತ್ತು ಅಂಡಮಾನ್ನಂಥ ಸಾಗರ ಪ್ರದೇಶಗಳಲ್ಲಿ ಸವಾಲಿನ ಕಾರ್ಯ ನಿರ್ವಹಿಸಲಿದ್ದಾರೆ.
ಕ
