ವಾಯುಪಡೆಗೆ ಹೊಸ ಶಕ್ತಿಯಾಗಿ ಮುಂದಿನ ತಿಂಗಳು ಭಾರತೀಯ ಸೇನೆಯನ್ನು ಸೇರಿಕೊಳ್ಳಲಿವೆ ಸೀಹಾಕ್ ಹೆಲಿಕಾಪ್ಟರ್ -Vishwanews24

Featured, ರಾಷ್ಟ್ರ ನ್ಯೂಸ್

ವಾಯುಪಡೆಗೆ ಹೊಸ ಶಕ್ತಿಯಾಗಿ ಮುಂದಿನ ತಿಂಗಳು ಭಾರತೀಯ ಸೇನೆಯನ್ನು ಸೇರಿಕೊಳ್ಳಲಿವೆ ಸೀಹಾಕ್ ಹೆಲಿಕಾಪ್ಟರ್ -Vishwanews24

ಹೊಸದಿಲ್ಲಿ : ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನ ನೌಕಾಬಲ ವೃದ್ಧಿಸಿಕೊಳ್ಳುತ್ತಿರುವುದು ಮತ್ತು ಹೆಚ್ಚು ಜಲಾಂತರ್ಗಾಮಿಗಳನ್ನು ನಿಯೋಜಿಸುತ್ತಿರುವ ಹಿನ್ನೆಲೆಯಲ್ಲಿ ವಾಯುಪಡೆಗೆ ಹೊಸ ಶಕ್ತಿಯಾಗಿ ಮೂರು 24 ಎಂಎಚ್-60 ಆರ್ ಸೀಹಾಕ್ ಹೆಲಿಕಾಪ್ಟರ್ಗಳು ಮುಂದಿನ ತಿಂಗಳು ಭಾರತೀಯ ಸೇನೆಯನ್ನು ಸೇರಿಕೊಳ್ಳಲಿವೆ.

ಹಿಂದೂ ಮಹಾಸಾಗರದಲ್ಲಿ ಭಾರತೀಯ ವಾಯುಪಡೆಯ ಜಲಾಂತರ್ಗಾಮಿ ನಿರೋಧಕ ಸಮರ ಸಾಮರ್ಥ್ಯವನ್ನು ಈ ಹೆಲಿಕಾಪ್ಟರ್ ಗಳ ಸೇರ್ಪಡೆ ಹೆಚ್ಚಿಸಲಿದೆ.ಅಮೆರಿಕ ಮೂಲದ ಸಿಕೊಸ್ಕಿ-ಲಾಕ್ ಹೀಡ್ ಮಾರ್ಟಿನ್ ಈ ಹೆಲಿಕಾಪ್ಟರ್ ಗಳನ್ನು ತಯಾರಿಸಿದೆ.