ವಿಚಾರಣೆಗೆ ಬರುವಂತೆ ಡಿಕೆಶಿ ಪುತ್ರಿಗೆ ಇಡಿಯಿಂದ ಸಮನ್ಸ್ ಜಾರಿ -Vishwanews24
ನವದೆಹಲಿ : ಸೆ.12 ವಿಚಾರಣೆಗೆ ಬರುವಂತೆ ಇಡಿಯಿಂದ ಡಿ.ಕೆ ಶಿವಕುಮಾರ್ ಅವರ ಐಶ್ವರ್ಯ ಅವರಿಗೆ ಸಮನ್ಸ್ ನೀಡಿದೆ.
ಸೆ.12 ರಂದು ಬೆಳಗ್ಗೆ 11 ಗಂಟೆಗೆ ಇಡಿ ಕೇಂದ್ರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ಐಶ್ವರ್ಯ ಅವರಿಗೆ ಸೂಚನೆ ನೀಡಲಾಗಿದೆ. ಡಿಕೆ ಶಿವಕುಮಾರ್ ಅವರ ಕಸ್ಟಡಿಯ ಅವಧಿ ಇದೇ 13 ರಂದು ಮುಕ್ತಾಯವಾಗುತ್ತಿರುವುದರಿಂದ 12 ರಂದೇ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಿರುವುದು ವಿಶೇಷವಾಗಿದೆ.
2017ರ ನವೆಂಬರ್ ತಿಂಗಳಿನಲ್ಲಿ ಶಿವಕುಮಾರ್ ತಾಯಿ ಗೌರಮ್ಮ, ಪತ್ನಿ ಉಷಾ, ಪುತ್ರಿ ಐಶ್ವರ್ಯ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಕಚೇರಿಯಲ್ಲಿ ಪ್ರತ್ಯೇಕವಾಗಿ ವಿಚಾರಣೆಗೆ ಹಾಜರಾಗಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದರು. ಈಗ ಮತ್ತೆ ವಿಚಾರಣೆಗೆ ಬರುವಂತೆ ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಬರುವಂತೆ ಇಡಿ ಹೇಳಿದೆ.
ಈ ಹಿಂದೆ ಐಟಿ ವಿಚಾರಣೆ ವೇಳೆಯಲ್ಲಿ ನನ್ನ ಮಗಳು ಐಶ್ವರ್ಯ ಸ್ವತಂತ್ರವಾಗಿ ವ್ಯಾಪಾರ ಮಾಡುವ ಉದ್ದೇಶದಿಂದ ಸೋಲ್ ಸ್ಪೇಸ್ ಅರೇನಾದಲ್ಲಿ ಶೇ.50ರಷ್ಟು ಷೇರು ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದಾಳೆ. ಇದಕ್ಕಾಗಿ ಆಕೆ, ರಿಯಲ್ ಎಸ್ಟೇಟ್ ಪ್ರಾಪರ್ಟಿಗಳಲ್ಲಿ ಷೇರು ಖರೀದಿಸಿ, ಪ್ರತ್ಯೇಕವಾಗಿ ರಿಯಲ್ ಎಸ್ಟೇಟ್ ಬಿಸಿನೆಸ್ ಆರಂಭಿಸಿದ್ದಾಳೆ. ಅದಕ್ಕೆ ಐಟಿ ರಿಟರ್ನ್ ಸಲ್ಲಿಸುತ್ತಿದ್ದಾಳೆ,’ ಎಂದು ಡಿ.ಕೆ ಶಿವಕುಮಾರ್ ಐಟಿ ಅಧಿಕಾರಿಗಳಿಗೆ ವಿವರಣೆ ನೀಡಿದ್ದರು. ಆದರೆ ಆದರೆ, ಮಗಳು ಕೋಟ್ಯಂತರ ರೂ. ಸಾಲ ಪಡೆದಿರುವುದಕ್ಕೆ ಪ್ರತಿಯಾಗಿ ಭದ್ರತೆ ರೂಪದಲ್ಲಿ ನೀಡಿರುವ ಸ್ವತ್ತು ಅಥವಾ ಗ್ಯಾರಂಟಿ ಕುರಿತು ಮಾಹಿತಿ ನೀಡಿಲ್ಲ ಹೀಗಾಗಿ ಈಗ ಇಡಿ ವಿಚಾರಣೆಗೆ ಬರುವಂತೆ ಹೇಳಿದೆ.
