ವಿಚ್ಛೇದಿತ ಮಹಿಳೆಯನ್ನ ಮದುವೆಯಾಗಿ ವಂಚನೆ :  ಚಿನ್ನಾಭರಣ ಸೇರಿ 36 ಲಕ್ಷ ರೂ. ಪಡೆದು ಎಸ್ಕೇಪ್‌ – vishwanews24

Featured, ರಾಜ್ಯ ನ್ಯೂಸ್

ವಿಚ್ಛೇದಿತ ಮಹಿಳೆಯನ್ನ ಮದುವೆಯಾಗಿ ವಂಚನೆ :  ಚಿನ್ನಾಭರಣ ಸೇರಿ 36 ಲಕ್ಷ ರೂ. ಪಡೆದು ಎಸ್ಕೇಪ್‌

ಬೆಂಗಳೂರು: ವಿಚ್ಛೇದಿತ ಮಹಿಳೆಯನ್ನ ಬಣ್ಣದ ಮಾತುಗಳಿಂದ ಯಾಮಾರಿಸಿ ಬಾಳು ಕೋಡೋದಾಗಿ ಮದುವೆಯಾಗಿದ್ದ ಮೋಹನ್ ರಾಜ್ ಎಂಬಾತನ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಚಿನ್ನಾಭರಣ ಸೇರಿ ಒಟ್ಟು 36 ಲಕ್ಷ ರೂ. ವಂಚನೆ ಮಾಡಿರುವ ಆರೋಪದ ಮೇಲೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಮೋಹನ್‌ ರಾಜ್‌ ಎಂಬಾತ ಮಹಿಳೆಗೆ ಬಾಳು ಕೊಡೋದಾಗಿ ಮದ್ವೆ ಆಗಿದ್ದ. ಮಗು ಕೂಡ ಆಗಿತ್ತು. ಆ ಬಳಿಕ ಹೊಸ ಮನೆ ಕಟ್ಟಿ ಹೊಸ ಜೀವನ ಶುರು ಮಾಡೋಣ ಅಂತಿದ್ದ ಮೋಹನ ಮಹಿಳೆಯಿಂದ ಹಣ ಪೀಕಿದ್ದ. ಚಿನ್ನಾಭರಣ ಸೇರಿ 36 ಲಕ್ಷ ಹಣ ಪಡೆದು ಎಸ್ಕೇಪ್‌ ಆಗಿದ್ದಾನೆ. ಇದೀಗ ನ್ಯಾಯಕ್ಕಾಗಿ ಮಹಿಳೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾಳೆ.

ಏನಿದು ಕೇಸ್‌?
ಮೋಹನ್ ರಾಜ್​ ಹಾಗೂ ಮಹಿಳೆ ಒಂದೇ ಏರಿಯಾದವರು. ಬನಶಂಕರಿಯಲ್ಲಿ ನೆಲೆಸಿದ್ದ ಮೋಹನ್​ಗೆ ಮಹಿಳೆ ಡಿವೋರ್ಸ್ ಕಥೆ ಗೊತ್ತಾಗಿದೆ. ಆಕೆಗೆ ಹಲವು ವರ್ಷಗಳಿಂದ ಪರಿಚಿತನಾಗಿದ್ದ ಈತ, ಇಬ್ಬರು ಮದುವೆಯಾಗೋಣ ಹೊಸ ಜೀವನ ನಡೆಸೋಣ ಅಂತ ಮಾತು ಕೊಟ್ಟು ತಾಳಿಕಟ್ಟಿದ್ದಾನೆ. ಬಳಿಕ ತನ್ನ ವರಸೆಯನ್ನೇ ಬದಲಿಸಿದ್ದಾನೆ. ಹೀಗಾಗಿ ಮಹಿಳೆ ಕಂಗಾಲಾಗಿದ್ದಾಳೆ.

ಮೋಹನ್‌ ರಾಜ್‌ ಮತ್ತು ಮಹಿಳೆ 10 ವರ್ಷಗಳಿಂದ ಪರಿಚಿತರು. 2022 ರಲ್ಲಿ ಮಹಿಳೆ ಜೊತೆಗೆ ಮೋಹನ್ ರಾಜ್ ವಿವಾಹ ನಡೆದಿದ್ದು. 2023 ರಲ್ಲಿ ದಂಪತಿಗೆ ಒಂದು ಹೆಣ್ಣು ಮಗು ಕೂಡ ಆಗಿತ್ತು. ಬಳಿಕ 2025 ರಲ್ಲಿ ಮನೆ ಬಿಟ್ಟು ಹೋದವನು ನಾಪತ್ತೆಯಾಗಿದ್ದಾನೆ. ಈ ಪ್ರಕರಣ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Leave a Reply