ವಿಜಯೇಂದ್ರಗೆ ನಿರಾಸೆ ಮೂಡಿಸಿದ ಬಿಜೆಪಿ ಪರಿಷತ್ ಅಭ್ಯರ್ಥಿಗಳ ಪಟ್ಟಿ – Vishwnaews24
ವಿಜಯೇಂದ್ರಗೆ ನಿರಾಸೆ ಮೂಡಿಸಿದ ಪರಿಷತ್ ಅಭ್ಯರ್ಥಿಗಳ ಪಟ್ಟಿ – VIshwnaews24
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಹೆಸರಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಆರಂಭವಾಗಿದೆ.
ಪರಿಷತ್ ಅಭ್ಯರ್ಥಿಗಳಾಗಿ ಲಿಂಗಾಯತ ಕೋಟಾದಡಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಧಾರವಾಡದ ಲಿಂಗರಾಜು ಪಾಟೀಲ್, ಮಹಿಳಾ ಹಾಗೂ ಒಕ್ಕಲಿಗ ಕೋಟಾದಡಿ ಶಿವಮೊಗ್ಗ ಮೂಲದ ಸಿ.ಮಂಜುಳಾ, ದಲಿತ ಕೋಟಾದಲ್ಲಿ ಎಸ್ ಸಿ ಘಟಕದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹಾಗೂ ಒಬಿಸಿ ಕೋಟಾದಡಿ ಕೇಶವ ಪ್ರಸಾದ್ ಅವರಿಗೆ ಪರಿಷತ್ ಟಿಕೆಟ್ ನೀಡಲಾಗಿದೆ.
ಇನ್ನು ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನವಾಗಿದ್ದು, ಪರಿಷತ್ ಟಿಕೆಟ್ ಪಡೆದು ಎಂಎಲ್ ಸಿಯಾಗಿ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದ ವಿಜಯೇಂದ್ರಗೆ ನಿರಾಸೆಯಾಗಿದೆ.
ವಿಧಾನ ಪರಿಷತ್‌ಗೆ ಬಿಜೆಪಿ ಪಟ್ಟಿ ಪ್ರಕಟ : ಲಿಂಗಾಯತರ ಕೋಟದಡಿಯಲ್ಲಿ ಲಕ್ಷ್ಮಣ ಸವದಿಗೆ ಟಿಕೆಟ್ – VIshwanews24
