ವಿಟ್ಲ: ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಮುಡಿಪುವಿನಲ್ಲಿ ಪತ್ತೆ – Vishwanews24

Featured, ದಕ್ಷಿಣ ಕನ್ನಡ

ವಿಟ್ಲ: ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಮುಡಿಪುವಿನಲ್ಲಿ ಪತ್ತೆ

ವಿಟ್ಲ: ತಾಯಿ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೊರಟು ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಇದೀಗ ಮಡಿಪುವಿನಲ್ಲಿ ಪತ್ತೆಯಾಗಿದ್ದಾರೆ.

ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಕಡಂಬು ನಿವಾಸಿ ನಾಗೇಶ್ ರವರ ಪತ್ನಿ ಕವಿತ(29 ) ಪತ್ತೆಯಾದವರು.

ಕೆಲಸಕ್ಕೆಂದು ತೆರಳಿದ ವಿವಾಹಿತ ಮಹಿಳೆಯೋರ್ವರು ನಾಪತ್ತೆಯಾಗಿರುವ ಕುರಿತು ಆಕೆಯ ಪತಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ವಿಟ್ಲದ ಸ್ವೀಟ್ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಕವಿತಾರವರು ಅ.೨೯ರಂದು ಕೆಲಸ ಮುಗಿಸಿ ತನ್ನ ತಾಯಿಮನೆಗೆ ತೆರಳುವುದಾಗಿ ಗಂಡನಲ್ಲಿ ತಿಳಿಸಿ ತೆರಳಿದ್ದರು.

ವಿಟ್ಲ: ವಿವಾಹಿತ ಮಹಿಳೆ ನಾಪತ್ತೆ – Vishwanews24

ರಾತ್ರಿಯಾದರೂ ಕವಿತಾರವರು ತಾಯಿ ಮನೆಗೆ ತಲುಪದ ಹಿನ್ನೆಲೆಯಲ್ಲಿ ಅವರ ಸಹೋದರ ಗಿರೀಶ್ ರವರು ನಾಗೇಶ್ ರವರಿಗೆ ಕರೆ ಮಾಡಿ ಸಹೋದರಿ ಬಂದಿಲ್ಲ ಎಂದು ತಿಳಿಸಿದ್ದರು.

ಕೂಡಲೇ ನಾಗೇಶ್ ರವರು ಮನೆಗೆ ತೆರಳುವ ದಾರಿಯ ಸಹಿತ ಸಂಬಂಧಿಕರ ಮನೆಯಲ್ಲಿ ಹುಡುಕಾಟ ನಡೆಸಿದರು ಕವಿತಾ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರು ಪತ್ನಿಯನ್ನು ಹುಡುಕಿ ಕೊಡುವಂತೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಈ ಭಾವಚಿತ್ರದಲ್ಲಿ ಕಾಣುವ ಮಹಿಳೆಯನ್ನು ಯಾರಾದರೂ ಕಂಡಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ವಿಟ್ಲ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಮನವಿ‌ ಮಾಡಿದ್ದರು.

ಅಪ್ರಾಪ್ತ ವಯಸ್ಕ ಮುಸ್ಲಿಂ ಬಾಲಕಿಯ ವಿವಾಹ ರದ್ದು : ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು – Vishwanews24

ಇದೀಗ ಪೋಲಿಸರ ಕಾರ್ಯಚರಣೆ ಯಿಂದ ನಾಪತ್ತೆಯಾಗಿದ್ದ ಮಹಿಳೆಯನ್ನು ಮುಡಿಪುವಿನಲ್ಲಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply