ವಿಶ್ವ ಸುಂದರಿ 2021 : 21 ವರ್ಷಗಳ ನಂತರ ಭಾರತಕ್ಕೆ ಮತ್ತೊಮ್ಮೆ ಕಿರೀಟ ತಂದುಕೊಟ್ಟ ಹರ್ನಾಜ್ ಕೌರ್ ಸಂಧು – Vishwanews24
ವಿಶ್ವ ಸುಂದರಿ 2021 : 21 ವರ್ಷಗಳ ನಂತರ ಭಾರತಕ್ಕೆ ಮತ್ತೊಮ್ಮೆ ಕಿರೀಟ ತಂದು ಕೊಟ್ಟ ಹರ್ನಾಜ್ ಕೌರ್ ಸಂಧು – Vishwanews24
ನವದೆಹಲಿ: ಇಸ್ರೇಲ್ನ ಐಲಾಟ್ನಲ್ಲಿ ನಡೆದ 70 ನೇ ವಿಶ್ವ ಸುಂದರಿ – 2021 ಕಿರೀಟವನ್ನು ಭಾರತದ ಹರ್ನಾಜ್ ಸಂಧು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 2000 ರಲ್ಲಿ ಲಾರಾ ದತ್ತಾ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದ 21 ವರ್ಷಗಳ ನಂತರ ಮತ್ತೊಮ್ಮೆ ಕಿರೀಟವನ್ನು ಭಾರತಕ್ಕೆ ತಂದುಕೊಟ್ಟಿದ್ದಾರೆ .ಜಾಗತಿಕವಾಗಿ ಲೈವ್-ಸ್ಟ್ರೀಮ್ ಈವೆಂಟ್ನಲ್ಲಿ ಮೆಕ್ಸಿಕೊದ ಮಾಜಿ ವಿಶ್ವ ಸುಂದರಿ 2020 ರ ಆಂಡ್ರಿಯಾ ಮೆಜಾ ಅವರು ಸಂಧು ಅವರಿಗೆ ಕಿರೀಟವನ್ನು ನೀಡಿದರು.
ವೃತ್ತಿಯಲ್ಲಿ ಮಾಡೆಲ್ ಆಗಿರುವ ಹರ್ನಾಜ್ ಮೂಲತಃ ಪಂಜಾಬ್ನ ಚಂಡೀಗಢದಿಂದ . ತಮ್ಮ ಆರಂಭಿಕ ಶಿಕ್ಷಣವನ್ನು ಚಂಡೀಗಢದ ಶಿವಾಲಿಕ್ ಪಬ್ಲಿಕ್ ಸ್ಕೂಲ್ನಲ್ಲಿ ಮಾಡಿದ್ದು ಬಳಿಕ ಚಂಡೀಗಢದಲ್ಲಿಯೇ ಪದವಿ ಪಡೆದ ನಂತರ, ಹರ್ನಾಜ್ ಪ್ರಸ್ತುತ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿದ್ದಾರೆ.
FINAL STATEMENT: India. #MISSUNIVERSE
The 70th MISS UNIVERSE Competition is airing LIVE around the world from Eilat, Israel on @foxtv pic.twitter.com/wwyMhsAyvd
— Miss Universe (@MissUniverse) December 13, 2021
ಚಂಡೀಗಢದ ಮಾಡೆಲ್ ಹರ್ನಾಜ್ ಸಂಧು ತಮ್ಮ ವೃತ್ತಿಜೀವನದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.ಇವುಗಳಲ್ಲಿ 2017 ರಲ್ಲಿ ಟೈಮ್ಸ್ ಫ್ರೆಶ್ ಫೇಸ್ ಮಿಸ್ ಚಂಡೀಗಢ, 2018 ರಲ್ಲಿ ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್, 2019 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಪಂಜಾಬ್ ಮತ್ತು 2021 ರಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ ಕೂಡಾ ಸೇರಿವೆ.
WHO ARE YOU? #MISSUNIVERSE pic.twitter.com/YUy7x9iTN8
— Miss Universe (@MissUniverse) December 13, 2021
ಮತಾಂತರ ನಿಷೇಧ ಕಾಯ್ದೆ ನಂತರ ಲವ್ ಜಿಹಾದ್ ವಿರುದ್ಧ ಕಾಯ್ದೆ ಜಾರಿಗೆ : ಸುನಿಲ್ ಕುಮಾರ್ – VIshwanews24
