ವಿಶ್ವದ ಅತೀ ದೊಡ್ಡ ಮೊಟೆರಾ ಮೈದಾನಕ್ಕೆ ‘ನರೇಂದ್ರ ಮೋದಿ ಸ್ಟೇಡಿಯಂ’ ಎಂದು ಮರುನಾಮಕರಣ, ರಾಷ್ಟ್ರಪತಿಗಳಿಂದ ಉದ್ಘಾಟನೆ -Vishwanews24
ವಿಶ್ವದ ಅತೀ ದೊಡ್ಡ ಮೊಟೆರಾ ಮೈದಾನಕ್ಕೆ ‘ನರೇಂದ್ರ ಮೋದಿ ಸ್ಟೇಡಿಯಂ’ ಎಂದು ಮರುನಾಮಕರಣ, ರಾಷ್ಟ್ರಪತಿಗಳಿಂದ ಉದ್ಘಾಟನೆ -Vishwanews24
ಅಹಮದಾಬಾದ್: ಗುಜರಾತ್ನ ಅಹಮದಾಬಾದ್ನಲ್ಲಿ ಹೊಸದಾಗಿ ನವೀಕರಣಗೊಂಡಿರುವ ವಿಶ್ವದ ಅತೀ ದೊಡ್ಡ ಮೊಟೆರಾ ಕ್ರೀಡಾಂಗಣವನ್ನು ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟನೆ ಮಾಡಿದ್ದಾರೆ. ಕ್ರೀಡಾಂಗಣಕ್ಕೆ ಸರ್ದಾರ್ ವಲ್ಲಭಬಾಯ್ ಪಟೇಲ್ ಕ್ರೀಡಾಂಗಣ ಎಂದು ಹೆಸರಿಸಲಾಗಿತ್ತು. ಈಗ ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ ಮಾಡಲಾಗಿದೆ.
ಭೂಮಿ ಪೂಜೆಯೊಂದಿಗೆ ಸ್ಟೇಡಿಯಂ ಅನ್ನು ರಾಷ್ಟ್ರಪತಿ ಉದ್ಘಾಟನೆ ಮಾಡಿದರು, ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆಯಲಿರುವ ಕ್ರಿಕೆಟ್ ಪಂದ್ಯಾಟದ ಹಿನ್ನೆಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾರ್ಯಕ್ರದಂದು ಸ್ಟೇಡಿಯಂನಲ್ಲಿರಲು ನನಗೆ ಸಾಧ್ಯವಾಗಲಿಲ್ಲ. ಪಿಂಕ್ ಟೆಸ್ಟ ನಮ್ಮ ಕನಸಾಗಿತ್ತು. ಈ ಸ್ಟೇಡಿಯಂ ನಿರ್ಮಾಣಕ್ಕೆ ತುಂಬಾ ಶ್ರಮ ವಹಿಸಲಾಗಿದೆ. ಎಂದು ಸದ್ಯ ವಿಶ್ರಾಂತಿಯಲ್ಲಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆ ನೀಡಿದ್ದಾರೆ.
ಮೂರನೇ ದಿನಕ್ಕೆ ತಲುಪಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಜನಧ್ವನಿ ಪಾದಯಾತ್ರೆ -Vishwanews24
ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ಡೇ ಆ್ಯಂಡ್ ನೈಟ್ ಪಿಂಕ್ ಬಾಲ್ ಟೆಸ್ಟ್ ನಡೆಯಲಿದೆ. ಸ್ಟೇಡಿಯಂ ನವೀಕರಣಗೊಂಡ ಬಳಿಕ ನಡೆಯುತ್ತಿರೋ ಮೊದಲ ಅಂತರಾಷ್ಟ್ರೀಯ ಪಂದ್ಯ ಇದಾಗಿದೆ. ಪಂದ್ಯದ ಆರಂಭಕ್ಕೂ ಮುನ್ನಕೋವಿಂದ್ ಅವರು ಮೈದಾನದಲ್ಲಿ ಭೂಮಿ ಪೂಜೆ ಮಾಡಿ ಉದ್ಘಾಟನೆ ನೆರವೇರಿಸಿದರು. ಸಮಾರಂಭದಲ್ಲಿ ಗೃಹ ಸಚಿವ ಅಮಿತ್ ಶಾ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಉಪಸ್ಥಿತರಿದ್ದರು.
ಕಾರ್ಕಳ : ಫೆ. 27 ರಂದು ಮಿಯ್ಯಾರು ಲವ- ಕುಶ ಜೋಡುಕರೆ ಕಂಬಳ -Vishwanews24

