ವಿಶ್ವನ್ಯೂಸ್24 ನ‌ 2020 ರ ಸಾಲಿನ ವಿಶ್ವಶ್ರೀ ಪುರಸ್ಕಾರ-2020 : ಪ್ರಶಸ್ತಿಗೆ ಧಾರ್ಮಿಕ ಕ್ಷೇತ್ರದಲ್ಲಿ ಕಾಪು ಕಮಲಾಕ್ಷ ಭಟ್ ಆಯ್ಕೆ..

Featured, ಉಡುಪಿ

ವಿಶ್ವನ್ಯೂಸ್24 ನ‌ 2020 ರ ಸಾಲಿನ ವಿಶ್ವಶ್ರೀ ಪುರಸ್ಕಾರ-2020 ಪ್ರಶಸ್ತಿಗೆ ಧಾರ್ಮಿಕ ಕ್ಷೇತ್ರದಲ್ಲಿ ಕಾಪು

ಕಮಲಾಕ್ಷ ಭಟ್ ಆಯ್ಕೆ

ದಿನಾಂಕ : 27-ಅಗಸ್ಟ್-2020 ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಕಾಪು: ಮಮಂತ್ರ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್. ನ ಅಂಗಸಂಸ್ಥೆಯಾದ ವಿಶ್ವನ್ಯೂಸ್24 ವತಿಯಿಂದ ಧಾರ್ಮಿಕ -ಸಾಮಾಜಿಕ-ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ವಿಶೇಷ ಸಾಧನೆ ಮಾಡಿದ ಗಣ್ಯರಿಗೆ ಕೊಡಲ್ಪಡುವ 2020 ಸಾಲಿನ “ವಿಶ್ವಶ್ರೀ ಪುರಸ್ಕಾರ” ಕ್ಕೆ ಧಾರ್ಮಿಕ ಕ್ಷೇತ್ರದಲ್ಲಿ ಕಾಪು ಕಮಲಾಕ್ಷ ಭಟ್ ಆಯ್ಕೆಯಾಗಿದ್ದಾರೆ.

ಕಾಪು ಕೊಂಕಣಿ ಮಠ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಕಾಪು ಹಳೆ ಮಾರಿಯಮ್ಮ‌ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಮಾಡುತ್ತಿರುವ ಇವರಿಗೆ ಈ ಗೌರವ ಪ್ರಶಸ್ತಿ ಅರ್ಪಣೆಯಾಗಲಿದೆ.

ದಿನಾಂಕ 27-ಅಗಸ್ಟ್-2020 ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.