ವಿಶ್ವನ್ಯೂಸ್24 ಸುದ್ದಿವಾಹಿನಿಯ ನೂತನ ಲೋಗೋ ಅನಾವರಣಗೊಳಿಸಿದ ಸಹಕಾರ ರತ್ನ ಡಾ ಎಮ್ ಎನ್ ರಾಜೇಂದ್ರ ಕುಮಾರ್ -vishwanews24
ವಿಶ್ವನ್ಯೂಸ್24 ಸುದ್ದಿವಾಹಿನಿಯ ನೂತನ ಲೋಗೋ ಅನಾವರಣಗೊಳಿಸಿದ ಸಹಕಾರ ರತ್ನ ಡಾ ಎಮ್ ಎನ್ ರಾಜೇಂದ್ರ ಕುಮಾರ್ .
ಮಂಗಳೂರು: ಮಮಂತ್ರ ಮೀಡಿಯಾ ನೆಟ್ವರ್ಕ್ ಗ್ರೂಪ್ ಆಫ್ ಕಂಪೆನಿಯ ಅಂಗ ಸಂಸ್ಥೆಯಾದ ವಿಶ್ವನ್ಯೂಸ್24 ಅಂತರ್ಜಾಲ ಸುದ್ದಿ ವಾಹಿನಿಯ ನಾಲ್ಕನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನೂತನ ಲೋಗೋ ಅನಾವರಣ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ನಡೆಯಿತು.
ಬ್ಯಾಂಕಿನ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ದ ಅಧ್ಯಕ್ಷರಾದ ಸಹಕಾರ ರತ್ನ ಡಾ.ಎಮ್ ಎನ್ ರಾಜೇಂದ್ರ ಕುಮಾರ್ ಲೋಗೋ ಅನಾವರಣ ಮಾಡಿದರು.
ಈ ಸಂಧರ್ಭದಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ, ವಿಶ್ವನ್ಯೂಸ್24 ನ ಸಂಪಾದಕ ಹಾಗೂ ಪ್ರವರ್ತಕ ಮೂಳೂರು ಪುರುಷೋತ್ತಮ ಸಾಲಿಯಾನ್ ಉಪಸ್ಥಿತಿತರಿದ್ದರು.


