ವಿಷ್ಣು ಸ್ಮಾರಕವನ್ನು ಸರ್ಕಾರ ಕೂಡಲೇ ಆಸಕ್ತಿ ವಹಿಸಿ ನಿರ್ಮಿಸಬೇಕು : ಶಾಸಕ ಬಿ.ಸಿ.ಪಾಟೀಲ್​

Featured, ರಾಜ್ಯ ನ್ಯೂಸ್

ಬೆಂಗಳೂರು : ಕನ್ನಡ ಚಿತ್ರರಂಗದ ದಿಗ್ಗಜ ನಟ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಕೂಡಲೇ ಆಸಕ್ತಿ ವಹಿಸಬೇಕು ಎಂದು ಶಾಸಕ ಬಿ.ಸಿ.ಪಾಟೀಲ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಸಾಹಸಸಿಂಹ ವಿಷ್ಣುವರ್ಧನ್ ಅವರು ಡಿಸೆಂಬರ್​ 30, 2009ರಂದು ವಿಧಿವಶರಾದರು. ಮುಂದಿನ ತಿಂಗಳ 30 ರಂದು 9ನೇ ವರ್ಷದ ಪುಣ್ಯ ಸ್ಮರಣೆ ನಡೆಯಲಿದ್ದು, ಕನಸಾಗೇ ಉಳಿದಿರುವ ವಿಷ್ಣು ಸ್ಮಾರಕದ ಕುರಿತು ಅಭಿಮಾನಿಗಳು ಧ್ವನಿಯೆತ್ತಿದ್ದಾರೆ. ರಾಜ್​ಕುಮಾರ್​ ಸ್ಮಾರಕ ಪಕ್ಕದಲ್ಲೇ ಅಂಬರೀಷ್​ ಸ್ಮಾರಕ ನಿರ್ಮಾಣವಾಗಲಿದ್ದು, ವಿವಾದ ಬಗೆಹರಿಸಿ ವಿಷ್ಣು ಸ್ಮಾರಕವನ್ನು ನಿರ್ಮಿಸಿ ಎಂಬುದು ಅಭಿಮಾನಿಗಳ ಆಶಯವಾಗಿದೆ..

ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಕೂಡಲೇ ಆಸಕ್ತಿ ವಹಿಸಬೇಕು. ಜಾಗದ ಸಮಸ್ಯೆಯಿದ್ದರೆ ಅವರ ಕುಟುಂಬವನ್ನು ಕೇಳಿ ಸ್ಮಾರಕವನ್ನು ನಿರ್ಮಿಸಿ, ವಿಷ್ಣು ಅವರ ಆತ್ಮಕ್ಕೆ ಶಾಂತಿಯನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.