ವೇಣೂರು ಗ್ರಾ. ಪಂ. ಚುನಾವಣೆ : ಆರು ಸ್ಧಾನಗಳಲ್ಲಿ ಬಿಜೆಪಿ ಬೆಂಬಲಿತರಿಗೆ ಗೆಲುವು -Vishwanews24

Featured, ದಕ್ಷಿಣ ಕನ್ನಡ

ವೇಣೂರು ಗ್ರಾ. ಪಂ. ಚುನಾವಣೆ : ಆರು ಸ್ಧಾನಗಳಲ್ಲಿ ಬಿಜೆಪಿ ಬೆಂಬಲಿತರಿಗೆ ಗೆಲುವು -Vishwanews24

ಬೆಳ್ತಂಗಡಿ : ವೇಣೂರು ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ 24 ಸ್ಥಾನಗಳಿಗೆ ಮಾ.29 ರಂದು ಚುನಾವಣೆ ನಡೆದಿದ್ದು, ಇಂದು ಬೆಳಗ್ಗಿನಿಂದಲೆ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು ಫಲಿತಾಂಶ ಹೊರ ಬಂದ ಆರು ಸ್ಧಾನಗಳನ್ನು ಬಿಜೆಪಿ ಬೆಂಬಲಿತರು ಗೆದ್ದುಕೊಂಡಿದ್ದಾರೆ.

ಕರಿಮಣೇಲು 1ನೇ ಕ್ಷೇತ್ರದ 3ಸ್ಥಾನಗಳಿಗೆ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ಧ ಅಭ್ಯರ್ಥಿಗಳಾದ ಅರುಣ್ ಹೆಗ್ಡೆ (585), ಮಾಲತಿ(560), ಸುಮ(533) ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ಧ ಹಾಮದ್ ಅಶ್ರಫ್(243), ವಿಮಲ(199), ರತ್ನಾವತಿ(194) ಮತಗಳನ್ನು ಪಡೆದು ಪರಾಜಯಗೊಂಡಿದ್ದಾರೆ.

ಕರಿಮಣೇಲು 2ನೇ ಕ್ಷೇತ್ರದ 3 ಸ್ಥಾನಗಳಿಗೆ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಾದ ಡಿ.ಪುಷ್ಪಾ(399), ಶೈಲಜಾ(374), ಜಿನ್ನು (392) ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಅರವಿಂದ(308), ಯಶೋಧಾ(237), ಶೀನಾ(209)ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.

ಇದನ್ನೂ ಓದಿ : ಮಂಗಳೂರು : ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ ದ.ಕ. ಜಿಲ್ಲಾ ಕಾಂಗ್ರೆಸ್ ವಿರೋಧ -Vishwanews24