ವೇಶ್ಯಾವಾಟಿಕೆ ದಂಧೆ: ಸ್ಯಾಂಡಲ್ ವುಡ್ ನಾಯಕ ನಟ ಅರೆಸ್ಟ್ – Vishwanews24
ವೇಶ್ಯಾವಾಟಿಕೆ ದಂಧೆ: ಸ್ಯಾಂಡಲ್ ವುಡ್ ನಾಯಕ ನಟ ಅರೆಸ್ಟ್
ಬೆಂಗಳೂರು: ಹೆಣ್ಣುಮಕ್ಕಳನ್ನು ಬಳಸಿಕೊಂಡು ಸುಲಿಗೆ ಮಾಡುತ್ತಿದ್ದ ಕನ್ನಡದ ನಟನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮೂರು ವರ್ಷಗಳ ಹಿಂದೆ ತೆರೆಕಂಡ ‘ನ್ಯೂರಾನ್’ ಸಿನಿಮಾದ ನಾಯಕ ಮಂಜುನಾಥ್ ಅಲಿಯಾಸ್ ಸಂಜು ಎಂದು ಗುರುತಿಸಲಾಗಿದೆ.
ಸಿನಿಮಾ ರಂಗದ ಹೆಸರನ್ನು ದುರುಪಯೋಗಪಡಿಸಿಕೊಂಡ ಈತ ಲೊಕ್ಯಾಂಟು ಆ್ಯಪ್ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ವಿಕಾಸ್ ಪುಷ್ಪಗಿರಿ ನಿರ್ದೇಶನದಲ್ಲಿ ಮೂಡಿ ಬಂದ ‘ನ್ಯೂರಾನ್’ ಸಿನಿಮಾ ಮಂಜುನಾಥ್ ಗೆ ತಕ್ಕ ಮಟ್ಟಿಗೆ ಹೆಸರು ತಂದುಕೊಟ್ಟಿತ್ತು. ಬಳಿಕ ಚಿತ್ರೋದ್ಯಮದಿಂದ ದೂರವಾಗಿ ಹೆಣ್ಣುಮಕ್ಕಳನ್ನುಬಳಸಿಕೊಂಡು ವೇಶ್ಯಾವಾಟಿಕೆ ದಂಧೆಯಲ್ಲಿ ನಿರತನಾಗಿದ್ದ.
ಉಡುಪಿ : ವಾಯುಸೇನೆಯ ಹುದ್ದೆಗಳಿಗೆ ನೇರ ನೇಮಕಾತಿ ರ‍್ಯಾಲಿ – Vishwanews24
ಖಚಿತ ಮಾಹಿತಿಯ ಮೇರೆಗೆ ಸದ್ದಗುಂಟೆ ಪಾಳ್ಯ ಪೊಲೀಸರು ಒಟ್ಟು ಐವರನ್ನು ಬಂಧಿಸಿದ್ದು, ಇವರಲ್ಲಿ ಮಂಜುನಾಥ್ ಕೂಡ ಒಬ್ಬನಾಗಿದ್ದಾನೆ.
Join our Whatsapp group by clicking the below link 👇👇
