ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಸಾವು ಪ್ರಕರಣ : ತನಿಖೆಗೆ ತುಳುನಾಡ ಹಿಂದೂ ಸೇನೆ ಹಾಗೂ ಕಾಪು ನಾಗರಿಕರಿಂದ ಆಗ್ರಹ: ತಹಸೀಲ್ದಾರರಿಗೆ ಮನವಿ -Vishwanews24
ಕಾಪು : ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಸಾವು ಪ್ರಕರಣ : ತನಿಖೆಗೆ ತುಳುನಾಡ ಹಿಂದೂ ಸೇನೆ ಹಾಗೂ ಕಾಪು ನಾಗರಿಕರಿಂದ ಆಗ್ರಹ: ತಹಸೀಲ್ದಾರರಿಗೆ ಮನವಿ -Vishwanews24
ಕಾಪು: ಉಡುಪಿಯ ಆಸ್ಪತ್ರೆಯಲ್ಲಿ ಅನುಮಾ ನಾಸ್ಪದವಾಗಿ ಸಾವನ್ನಪ್ಪಿದ ಕಾಪು ಮೂಲದ ಶ್ರೀ ರಕ್ಷಾ ಅವರ ಸಾವಿನ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತುಳುನಾಡ ಹಿಂದೂ ಸೇನೆ ಹಾಗೂ ಕಾಪು ನಾಗರಿಕರಿಂದ ಕಾಪು ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಬಗ್ಗೆ ಮಾತನಾಡಿದ ಮೃತರ ಪತಿ, ಸಾವಿನ ಕುರಿತು ನ್ಯಾಯ ಸಿಗುವ ವರೆಗೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ತುಳುನಾಡ ಹಿಂದೂ ಸೇನೆ ಕಾರ್ಯದರ್ಶಿ ಯಾದವ್ ಪೂಜಾರಿ, ನಿತಿನ್ ಕೋಟ್ಯಾನ್, ಶ್ರೀರಕ್ಷಾ ಅವರ ಪತಿ ಶಿವ ಪ್ರಸಾದ್ ಬಂಗೇರ, ಸಚಿನ್ ಶೆಟ್ಟಿ ನಡಿಕೆರೆ, ಪ್ರಥ್ವಿ ಸಹೋದರ, ರವಿ ಬಿಂದಾಸ್ ಹಾಗೂ ನಾಗರಿಕರು ಉಪಸ್ಥಿತರಿದ್ದರು.
