ವೈಯರ್‌ನಿಂದ ಕತ್ತು ಬಿಗಿದು ಉಸಿರುಗಟ್ಟಿಸಿ ಯುವತಿಯ ಕೊಲೆ : ಪ್ರಿಯತಮ ಅರೆಸ್ಟ್ – vishwanews24
ವೈಯರ್‌ನಿಂದ ಕತ್ತು ಬಿಗಿದು ಉಸಿರುಗಟ್ಟಿಸಿ ಯುವತಿಯ ಕೊಲೆ : ಪ್ರಿಯತಮ ಅರೆಸ್ಟ್
ಬೆಂಗಳೂರು: ವೈಯರ್‌ನಿಂದ ಕತ್ತು ಬಿಗಿದು ಲಿವ್ ಇನ್ ಗೆಳತಿಯನ್ನು ವಿವಾಹಿತ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ನಡೆದಿದೆ.
ಕೊಡಗು ಮೂಲದ ರಂಜಿತಾಳನ್ನು (23) ಆರೋಪಿ ಅಯ್ಯಪ್ಪ ಕೊಲೆ ಮಾಡಿದ್ದಾನೆ. ಇಬ್ಬರು ಲಿವ್ ಇನ್ ರಿಲೇಶನ್ಶಿಪ್‌ನಲ್ಲಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ:
ಕಾಸರಗೋಡು: ಪುತ್ರನ ಅಗಲಿಕೆಯಿಂದ ನೊಂದ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು – vishwanews24
ಆರೋಪಿ ಅಯ್ಯಪ್ಪನಿಗೆ ಈ ಮೊದಲೇ ಮದುವೆಯಾಗಿತ್ತು. ಆದರೆ ಮದುವೆಯಾಗಿರುವ ವಿಷಯ ಯುವತಿಗೆ ತಿಳಿದಿರಲಿಲ್ಲ. ಇದೀಗ ಈ ವಿಚಾರ ತಿಳಿದು ಇಬ್ಬರ ಮಧ್ಯೆ ಗಲಾಟೆ ಶುರುವಾಗಿತ್ತು. ಗಲಾಟೆ ತಾರಕಕ್ಕೇರಿ ಆರೋಪಿ ವೈಯರ್‌ನಿಂದ ಯುವತಿಯ ಕತ್ತು ಬಿಗಿದು ಕೊಲೆ ಮಾಡಿದ್ದಾನೆ.
ಸದ್ಯ ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:
ಉಡುಪಿ: ಕಾಂಪೌಂಡ್ ಗೋಡೆಗೆ ಸ್ಕೂಟರ್ ಡಿಕ್ಕಿ; ತಾಯಿ ಸಾವು, ಪುತ್ರನಿಗೆ ಗಂಭೀರ ಗಾಯ – vishwanews24
