ವೈವಾಹಿಕ ಜೀವನಕ್ಕೆ ಕಾಲಿಟ್ಟ ಲಕ್ಷ್ಮಿ ನಿವಾಸ ನಟಿ ಚಂದನಾ ಅನಂತಕೃಷ್ಣ – vishwanews24
ವೈವಾಹಿಕ ಜೀವನಕ್ಕೆ ಕಾಲಿಟ್ಟ ಲಕ್ಷ್ಮಿ ನಿವಾಸ ನಟಿ ಚಂದನಾ ಅನಂತಕೃಷ್ಣ
ಲಕ್ಷ್ಮಿ ನಿವಾಸ’ ನಟಿ ಚಂದನಾ ಅನಂತಕೃಷ್ಣ ಅವರು ಇಂದು (ನ.28) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಅದ್ಧೂರಿಯಾಗಿ ನಟಿಯ ಮದುವೆ ಜರುಗಿದೆ. ಈ ಸಂಭ್ರಮದಲ್ಲಿ ಕಿರುತೆರೆಯ ಕಲಾವಿದರು ಭಾಗಿಯಾಗಿ ಹೊಸ ಜೋಡಿಗೆ ಶುಭಹಾರೈಸಿದ್ದಾರೆ.
ಗುರುಹಿರಿಯರು ನಿಶ್ಚಿಯಿಸಿದ ಮದುವೆ ಇದಾಗಿದ್ದು, ಇತ್ತೀಚೆಗೆ ಕುಟುಂಬಸ್ಥರು ಸಮ್ಮುಖದಲ್ಲಿ ನಟಿಯ ನಿಶ್ಚಿತಾರ್ಥ ಸರಳವಾಗಿ ನಡೆದಿತ್ತು. ಇಂದು ಅದ್ಧೂರಿಯಾಗಿ ಚಂದನಾ ಮತ್ತು ಪ್ರತ್ಯಕ್ಷ್ ಮದುವೆ ನಡೆದಿದೆ.
ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಸಚಿವ ಮಂಕಾಳ ವೈದ್ಯರೊಂದಿಗೆ ಮಲ್ಪೆ ಮೀನುಗಾರರ ನಿಯೋಗದ ಸಭೆ – vishwanews24
ಪ್ರತ್ಯಕ್ಷ್ ಅವರು ಉದ್ಯಮಿಯಾಗಿದ್ದಾರೆ. ವಿಶೇಷ ಅಂದರೆ, ಪ್ರತ್ಯಕ್ಷ್ ಪೋಷಕರು ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದಿವಂಗತ ಉದಯ್ ಹುತ್ತಿನಗದ್ದೆ ಅವರು ಡಾ.ರಾಜ್ಕುಮಾರ್ ಜೊತೆ ದೇವತಾ ಮನುಷ್ಯ ಚಿತ್ರದಲ್ಲಿ ನಟಿಸಿದ್ದರು. ಆರಂಭ, ಅಗ್ನಿಪರ್ವ, ಶುಭ ಮಿಲನ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದರು. ಅವರ ಪತ್ನಿ ಲಲಿತಾಂಜಲಿ ಉದಯ್ ಕೂಡ ಹಿರಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.
ನ.29ರಿಂದ ಬೆಂಗಳೂರು- ಶಬರಿಮಲೆ KSRTC ವಿಶೇಷ ಬಸ್ ಆರಂಭ; ವೇಳಾಪಟ್ಟಿ ಇಲ್ಲಿದೆ – vishwanews24
