ಶಂಕರಪುರ ಸಾಯಿ ಸಾಂತ್ವನ ಮಂದಿರದ ಗುರೂಜಿ ಸಾಯಿಈಶ್ವರ್ ರ ಜನವರಿ 23 ರಂದು ಬೆಂಗಳೂರಿನ ದಾರಿ ಬೆಳಕು ಸೇವಾ ಕಚೇರಿ ಉದ್ಘಾಟನೆ.
ಕಾಪು: ಕರ್ನಾಟಕ ಸಾಯಿಬಾಬಾ ಬಿರುದಾಂಕಿತ ಉಡಪಿ ಜಿಲ್ಲೆಯ ಕಟಪಾಡಿ ಶಂಕರಪುರದ ಸಾಯಿಸಾಂತ್ವನ ಮಂದಿರದ ಗುರೂಜಿ ಸಾಯಿ ಈಶ್ವರ್ ಅವರ ಸೇವಾ ಕಚೇರಿ ಇದೇ ಬರುವ ತಾರೀಖು ಜನವರಿ 23 ಬುಧವಾರದಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ದಾರಿದೀಪ ನಾಮಾಂಕಿತದೊಂದಿಗೆ ಉದ್ಘಾಟನೆ ಗೊಳ್ಳಲಿದೆ.
ಬೆಂಗಳೂರು ಮೂಲದ ಉದ್ಯಮಿ ದಯಾನಂದ್ ಮತ್ತು ಹೇಮಾ ದಯಾನಂದ್ ದಂಪತಿಗಳು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆ ಮಾಡಲಿದ್ದಾರೆ.
ಗುರೂಜಿ ಸಾಯಿ ಈಶ್ವರ್ ಅವರ ದಿವ್ಯ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪತ್ರಕರ್ತೆ,ಲೇಖಕಿ ನಿರ್ಮಾಪಕಿ ರೇಖಾರಾಣಿ,ಟೀವಿ ವಾಹಿನಿ ನಿರೂಪಕ ನವೀನ್ ಶೆಟ್ಟಿ,ಉದ್ಯಮಿಗಳಾದ ರವಿಕುಮಾರ್,ಗುಣರಾಜ್ ಶೆಟ್ಟಿ,ಜಯರಾಮ್ ಬಿ.ಸಿ, ಹಾಗೂ ಸಾಯಿ ಸಾಂತ್ವನ ಮಂದಿರದ ಅಧ್ಯಕ್ಷರಾದ ಸುಧಕರ್ ಶೆಟ್ಟಿ ,ಟ್ರಸ್ಟಿ ವಿಶ್ವನಾಥ್ ಸುವರ್ಣ,ಕಟಪಾಡಿ ಜೆಸಿಐ ನ ಅಧ್ಯಕ್ಷೆ ಜಯಶ್ರೀ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುತ್ತಾರೆ .
ಉಡುಪಿ ಮಂಗಳೂರು ಭಾಗದಲ್ಲಿ ಸಾಯಿ ತುತ್ತು,ಪ್ರಾಣಿ ಪಕ್ಷಿಗಳ ಮೋಕ್ಷ ಚಿಂತನ ವಾಹನ,ಸಾಯಿ ವಿದ್ಯಾ,ಸಾಯಿ ಸ್ಪರ್ಶ ಹಾಗೂ ಗೋಶಾಲೆ ನಿರ್ಮಾಣದಂತಹ ನಾನಾ ರೀತಿಯ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಮಾನಸರಾಗಿದ್ದ ಗುರೂಜಿ ಸಾಯಿ ಈಶ್ವರ್ ಇದೀಗ ಬೆಂಗಳೂರಿನ ಕಚೇರಿಯಲ್ಲಿಯೂ ಲಭ್ಯವಿರುತ್ತಾರೆಂದು ಟ್ರಸ್ಟ್ ನ ಪ್ರಕಟನೆ ತಿಳಿಸಿದೆ.
