ಶಂಕರಪುರ ಸಾಯಿಬಾಬಾ ಮಂದಿರದ ವತಿಯಿಂದ ಯುಗಾದಿ ಆಹಾರದ ಕಿಟ್ ವಿತರಣೆಗೆ ತಯಾರಿ.vishwanews24

Featured, ಉಡುಪಿ

ಶಂಕರಪುರ ಸಾಯಿಬಾಬಾ ಮಂದಿರದ ವತಿಯಿಂದ ಯುಗಾದಿ ಆಹಾರದ ಕಿಟ್ ವಿತರಣೆಗೆ ತಯಾರಿ.

ಕಾಪು: ಶಂಕರಪುರ ಸಾಯಿಬಾಬಾ ಮಂದಿರದ ಗುರೂಜಿ ಸಾಯಿ ಈಶ್ವರ್ ವತಿಯಿಂದ ಇಂದು ಬಡಕುಟುಂಬಗಳನ್ನು ಗುರುತಿಸಿ ಹಂಚಲು ಯುಗಾದಿ ಹಬ್ಬ ಆಚರಣೆಗೆ ಬೇಕಾಗುವ ಯುಗಾದಿ ಕಿಟ್ ತಯಾರಿಸಲಾಗಿದೆ.
ಸುಮಾರು ನೂರು ಕಿಟ್ ತಯಾರಿಸಿದ್ದು ಅರ್ಹ ಕುಟುಂಬಗಳಿಗೆ ಹಂಚುವ ಕಾರ್ಯ ಆದಿತ್ಯವಾರ ಮತ್ತು ಸೋಮವಾರ ನಡೆಯಲಿದೆ.
ಈ ಕಿಟ್ ನಲ್ಲಿ ಬೆಲ್ಲ,ಅಕ್ಕಿ,ಸಾಬಕಿ,ಕಡ್ಲೆಬೆಳೆ,ದ್ರಾಕ್ಷಿ, ಬೀಜ ತೆಂಗಿನ ಕಾಯಿ,ಸೌತೆಕಾಯಿ ಇರಲಿದೆ.
ಲಾಕ್-ಡೌನ್ ಸಮಯದಲ್ಲಿ ಯುಗಾದಿ ಆಚರಿಸಲು ಸಮಸ್ಯೆ ಇರುವ ಕುಟುಂಬದ ಕೈ ಸೇರಲಿದೆ ಈ ಕಿಟ್.
ಇದುವರೆಗೆ 500 ಕ್ಕೂ ಅಧಿಕ ಕುಟುಂಬಗಳಿಗೆ ಅಕ್ಕಿ ಸಾಂಬಾರು ಪದಾರ್ಥಗಳ ಕಿಟ್ಟ್ಗಳನ್ನು ಹಸ್ತಾಂತರಿಸಿದ್ದು,ಪ್ರತಿದಿನ ಮಧ್ಯಾಹ್ನ ಸಾಯಿ ತುತ್ತು ಹೆಸರಿನಲ್ಲಿ ನಿರ್ಗತಿಕರಿಗೆ ಅನ್ನದಾನ ಮಾಡುವ ಕಾರ್ಯ ಕೂಡ ನಡೆಯುತ್ತಿದೆ.


ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಗುರೂಜಿ” ಪ್ರತಿಯೊಬ್ಬನಿಗೂ ಜೀವನದಲ್ಲಿ ಕಷ್ಟ ಸುಖ ಇರುವುದು ಸಾಮಾನ್ಯ ಅದು ಯುಗಾದಿ ಹಬ್ಬದ ಸಂಕೇತವು ಅದು ಬೇವು ಬೆಲ್ಲ ಸ್ವೀಕರಿಸಿದಂತೆ .ಈ ಇದುವರೆಗೆ ಲಾಕ್-ಡೌನ್ ಸಮಸ್ಯೆಯಾದ ಬಡ ಕುಟುಂಬಗಳಿಗೆ ನಮ್ಮಿಂದಾದ ಅಳಿಲು ಸೇವೆ ಮಾಡಿದ್ದೇವೆ.ಆದರೇ ಈ ಬಾರಿ ಯುಗಾದಿ ಕೂಡ ಲಾಕ್-ಡೌನ್ ಜತೆ ಸೇರಿಕೊಂಡಿರುವ ಕಾರಣದಿಂದ ಬಡವರು ಕೂಡ ಹಬ್ಬ ಆಚರಣೆ ಮಾಡಲಿ ಎಂಬ ಸದುದ್ದೇಶದಿಂದ ಈ ಕಿಟ್ ವಿತರಣೆ ಮಾಡುವ ಯೋಜನೆ ಮಾಡುತ್ತಿದ್ದು ಇವೆಲ್ಲವೂ ಕೂಡ ಬಾಬಾನ ಪ್ರೇರಣೆ ಮತ್ತು ಪ್ರಸಾದ ಎಂದರು.”
ಗುರೂಜಿ ಸಾಯಿ ಈಶ್ವರ್ ಜತೆ ಅವರ ಅನುಯಾಯಿಗಳಾದ ಸತೀಶ್ ದೇವಾಡಿಗ ,ಅಮಿತ್,ಮೊದಲಾದವರು ವಿತರಣೆಗೆ ಕೈ ಜೋಡಿಸಲಿದ್ದಾರೆ.

ಬ್ಯೂರೊ ರಿಪೋರ್ಟ್: vishwanews24