ಶಂಕಿತ ಡೆಂಗ್ಯೂಗೆ 2 ವರ್ಷದ ಮಗು ಬಲಿ..! Vishwanews24

Featured, ರಾಜ್ಯ ನ್ಯೂಸ್

ದಾವಣಗೆರೆ : ಶಂಕಿತ ಡೆಂಗ್ಯೂಗೆ 2 ವರ್ಷದ ಮಗು ಬಲಿ!

ದಾವಣಗೆರೆ: ಡೆಂಗ್ಯೂ ಜ್ವರಕ್ಕೆ 2 ವರ್ಷ 11 ತಿಂಗಳ ಮಗು ಬಲಿಯಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ  ತಾಲೂಕಿನ ಚಿಕ್ಕೂಡ  ಗ್ರಾಮದಲ್ಲಿ ನಡೆದಿದೆ.

ಮೃತ ಮಗುವನ್ನು ಚಿಕ್ಕೂಡ ಗ್ರಾಮದ ರಾಜಪ್ಪ ಮತ್ತು ದಿವ್ಯ ದಂಪತಿಯ 2 ವರ್ಷದ 11 ತಿಂಗಳ ನಿರ್ವಾಣ ಕುಮಾರ್ ಎಂದು ಗುರುತಿಸಲಾಗಿದೆ.

5 ದಿನಗಳಿಂದ ಮಗು ತೀವ್ರ ಜ್ವರದಿಂದ ಬಳಲುತ್ತಿತ್ತು. ಚಿಕಿತ್ಸೆಗಾಗಿ ಮಗುವನ್ನು ಜಿಲ್ಲೆಯ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ  ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕವು ಸ್ವಲ್ಪವೂ ಚೇತರಿಕೆ ಕಾಣದೇ ಮಗು ಸಾವನ್ನಪ್ಪಿದೆ. ಗ್ರಾಮದಲ್ಲಿ ಸ್ವಚ್ಚತೆ ಇಲ್ಲದಿರುವುದರಿಂದ ಡೆಂಗ್ಯೂಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

 

Leave a Reply