ಶಬರಿಮಲೆ ವಿವಾದ :ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಮಾನ್ಯತೆ ಸಿಕ್ಕಿದೆ ; ದೇವರನ್ನು ನೋಡಲು ಅವರು ಪುಣ್ಯ ಮಾಡಿದ್ದಾರೆ : ಸಚಿವೆ ಜಯಮಾಲಾ
ಬೆಂಗಳೂರು, : ಇಬ್ಬರು ಹೆಣ್ಣು ಮಕ್ಕಳಿಗೆ ಸಂವಿಧಾನಾತ್ಮಕವಾಗಿ ದೇಗುಲ ಪ್ರವೇಶಕ್ಕೆ ಮಾನ್ಯತೆ ಸಿಕ್ಕಿದೆ. ಹೀಗಾಗಿ ಹೆಣ್ಣು ಮಕ್ಕಳಿಗೆ ದೇವರನ್ನು ನೋಡುವ ಯೋಗ ಸಿಕ್ಕಿದ್ದರಿಂದ ಹೋಗಿದ್ದಾರೆ ಅಂತ ಸಚಿವೆ ಜಯಮಾಲಾ ಹೇಳಿದ್ದಾರೆ.
ಇವರು 50 ವರ್ಷಕ್ಕಿಂತ ಒಳಗಿನ ಇಬ್ಬರು ಮಹಿಳೆಯರು ಬುಧವಾರ ಮುಂಜಾನೆ ದೇಗುಲ ಪ್ರವೇಶಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಶಬರಿಮಲೆ ಪ್ರವೇಶಿಸಲು ಕಾನೂನಿನ ಪ್ರಕಾರವೇ ಅವರಿಗೆ ಅವಕಾಶ ದೊರಕಿದೆ. ಭಗವಂತನನ್ನು ನೋಡಲು ಅವರಿಬ್ಬರು ಪುಣ್ಯ ಮಾಡಿದ್ದಾರೆ ಎಂದಿದ್ದಾರೆ.
ಬಹುಸಂಖ್ಯೆಯಲ್ಲಿರುವ ಭಕ್ತರ ಮನಸ್ಸಿಗೆ ನೋವುಂಟು ಮಾಡಿ ಅಯ್ಯಪ್ಪ ದೇಗುಲ ಪ್ರವೇಶಿಸಿದ್ದು ಸರಿಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವೆ, ಬಲತ್ಕಾರವಾಗಿ ಯಾವುದೋ ಬೇರೆ ಜನಾಂಗದವರು ದೇಗುಲವನ್ನು ಪ್ರವೇಶಿಸಿದಲ್ಲ.ಇದು ಭಕ್ತಿ ಮತ್ತು ದೇವರ ವಿಚಾರವಾಗಿದೆ , ಹಿಂದೂಗಳು ಹಿಂದೂ ದೇವಸ್ಥಾನಕ್ಕೆ ಹೋಗೋದರಲ್ಲಿ ತಪ್ಪೇನಿದೆ? ದೇವರನ್ನು ನೋಡಬೇಕು ಎಂಬ ಆಸೆಯಿಂದ ಅಲ್ಲಿಗೆ ಹೋಗಿದ್ದಾರೆ. ದೇವರ ಕೃಪೆಯೂ ಅವರ ಮೇಲಿತ್ತು. ಒಟ್ಟಿನಲ್ಲಿ ಕಾನೂನಾತ್ಮಕವಾಗಿ ಮಾನ್ಯತೆ ಸಿಕ್ಕಿದೆ. ಹೀಗಾಗಿ ಹೋಗಿದ್ದಾರೆ ಅಷ್ಟೇ. ಅವರು ಪುಣ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
