ಶಾರದೆ ಮಾತೆ ಸಹಿತ ನವದುರ್ಗೆಯರ ಜಲಸ್ತಂಭನ -ಸಂಪನ್ನಗೊಂಡ 2024 ಉಚ್ಚಿಲ ದಸಾರ : vishwanews24
ಶಾರದೆ ಮಾತೆ ಸಹಿತ ನವದುರ್ಗೆಯರ ಜಲಸ್ತಂಭನ -ಸಂಪನ್ನಗೊಂಡ 2024 ಉಚ್ಚಿಲ ದಸಾರ : vishwanews24
ಕಾಪು :- ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಜರಗುತ್ತಿ ರುವ ಉಡುಪಿ ಉಚ್ಚಿಲ ದಸರಾ – 2024ರ ಪ್ರಯುಕ್ತ ಪ್ರತಿಷ್ಠಾಪಿಸಲಾಗಿರುವ ನವದುರ್ಗೆಯರು ಮತ್ತು ಶಾರದಾ ಮಾತೆಯ ವಿಗ್ರಹಗಳ ಜಲಸ್ತಂಭನ ಕಾರ್ಯಕ್ರಮ ಯಶಸ್ವಿಯಾಗಿ ಕಾಪುವಿನ ಕಡಲ ಕಿನಾರೆಯಲ್ಲಿ ನಡೆಯಿತು.
ಜಲಸ್ತಂಭನದ ಪೂರ್ವದಲ್ಲಿ ಕಾಶಿ ಗಂಗಾರತಿ ಮಾದರಿಯಲ್ಲಿ 10 ಬೃಹತ್ ಆರತಿಗಳೊಂದಿಗೆ ಮಹಾ ಮಂಗಳಾರತಿ ನಡೆದ ನಂತರ ಸೇರಿದ ಸಾವಿರಾರು ಸುಮಂಗಲೆಯರಿಂದ ಸಾಮೂಹಿಕ ಮಹಾಮಂಗಳಾರತಿ ನೆರವೇರಿದ ನಂತರ ಸಮುದ್ರದ ಮಧ್ಯೆ ಏಕಕಾಲದಲ್ಲಿ ನವದುರ್ಗೆ -ಶಾರದಾ ಮಾತೆ ಸಹಿತ ವಿಗ್ರಹಗಳ ಜಲಸ್ತಂಭನ ನಡೆಸಿದರು. ಈ ಸಂಧರ್ಭದಲ್ಲಿ ಸುಡುಮದ್ದು ಪ್ರದರ್ಶನ ನಡೆಯಿತು.
ಶಾರದೆ ಮತ್ತು ನವದುರ್ಗೆಯರ ವಿಗ್ರಹಗಳನ್ನೊಳಗೊಂಡ 10 ಟ್ಯಾಬ್ಲೋ ಗಳ ಸಹಿತ ಸಾಮಾಜಿಕ ಜಾಗೃತಿ ಸಂದೇಶ ಸಾರುವ ಟ್ಯಾಬ್ಲೋಗಳು, ಭಜನೆ ತಂಡಗಳು, ತೆಯ್ಯಂ ಸಹಿತ ವಿವಿಧ ವೇಷಭೂಷಣಗಳು, ಹುಲಿ ವೇಷ, ಚೆಂಡೆ ಬಳಗ, ನಾಗಸ್ವರ, ವಾದ್ಯ ಸಹಿತ ನಾಸಿಕ್ ಬ್ಯಾಂಡ್ ತಂಡಗಳು ಹಾಗೂ 50ಕ್ಕೂ ಅಧಿಕ ಟ್ಯಾಬ್ಲೋ ಒಳಗೊಂಡ ಶೋಭಾ ಯಾತ್ರೆ ನಭೂತೋ ಎಂಬತ್ತೆ ನಡೆಯಿತು.
ದಸರಾ ರೂವಾರಿ ಡಾ| ಜಿ. ಶಂಕರ್, ಪ್ರಮುಖರಾದ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಗಿರಿಧರ ಸುವರ್ಣ, ವಿನಯ್ ಕರ್ಕೇರ,ಶಾಸಕ ಯಶ್ಪಾಲ್ ಸುವರ್ಣ,ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.




