ಶಾರುಖ್‌ ಖಾನ್ ಪತ್ನಿ ಗೌರಿ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲು – Vishwanews24

Featured, ರಾಷ್ಟ್ರ ನ್ಯೂಸ್

ಶಾರುಖ್‌ ಖಾನ್ ಪತ್ನಿ ಗೌರಿ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲು

ಲಖನೌ: ಬಾಲಿವುಡ್‌ ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಗೌರಿ ಖಾನ್ ವಿರುದ್ಧ ಮುಂಬೈ ನಿವಾಸಿ ಜಸ್ವಂತ್ ಶಾ ಎಂಬುವರು ದೂರು ನೀಡಿದ್ದು, ಗೌರಿ ಖಾನ್‌ ವಿರುದ್ಧ ಐಪಿಸಿ ಸೆಕ್ಷನ್ 409ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗೌರಿ ಖಾನ್‌ ಅವರು ತುಳಸಿಯಾನಿ ಕಟ್ಟಡ ನಿರ್ಮಾಣ ಕಂಪನಿಗೆ ಬ್ರಾಂಡ್‌ ಅಂಬಾಸಿಡರ್‌ ಆಗಿದ್ದು, ಇವರ ಪ್ರಭಾವದಿಂದಾಗಿಯೇ ನಾನು ಇದೇ ಕಂಪನಿ ನಿರ್ಮಾಣ ಮಾಡಿದ್ದ ಪ್ಲಾಟ್‌ ಖರೀದಿಸಿದ್ದೆ. ಇದಕ್ಕೆ 86 ಲಕ್ಷ ಹಣವನ್ನು ಪಾವತಿ ಮಾಡಿದ್ದೇನೆ. ಆದರೆ ಕಂಪನಿಯವರು ನನಗೆ ನೀಡಬೇಕಾದ ಪ್ಲಾಟ್‌ ಅನ್ನು ಬೇರೆಯವರಿಗೆ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಮಂಗಳೂರು : ಭ್ರಷ್ಟಾಚಾರ ಆರೋಪ – ಪಾಂಡೇಶ್ವರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್‌ ಶ್ರೀಲತಾ ಅಮಾನತು – Vishwanews24

ಇನ್ನು ಗೌರಿ ಖಾನ್‌ ಮಾತ್ರವಲ್ಲದೇ ಕಂಪನಿ ಎಂಡಿ ಅನಿಲ್ ಕುಮಾರ್ ತುಳಸಿಯಾನಿ, ನಿರ್ದೇಶಕ ಮಹೇಶ್ ತುಳಸಿಯಾನಿ ವಿರುದ್ಧವೂ ಜಸ್ವಂತ್ ಶಾ ದೂರು ದಾಖಲಿಸಿದ್ದಾರೆ.

Leave a Reply