ಶಿಕ್ಷಕರ ನೇಮಕಾತಿ ಹಗರಣ : 10 ದಿನ ಸಚಿವ ಪಾರ್ಥ ಚಟರ್ಜಿ ಇ.ಡಿ ಕಸ್ಟಡಿಗೆ – Vishwanews24

Featured, ರಾಷ್ಟ್ರ ನ್ಯೂಸ್

ಶಿಕ್ಷಕರ ನೇಮಕಾತಿ ಹಗರಣ : 10 ದಿನ ಸಚಿವ ಪಾರ್ಥ ಚಟರ್ಜಿ ಇ.ಡಿ ಕಸ್ಟಡಿಗೆ

ಕೋಲ್ಕತ್ತ : ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತದ ಕೈಗಾರಿಕಾ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರನ್ನು 10 ದಿನಗಳ ಕಾಲ ಕೋಲ್ಕತ್ತ ನ್ಯಾಯಾಲಯವು ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿದೆ.

ಚಟರ್ಜಿ ಅವರನ್ನು ಭುವನೇಶ್ವರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಅವರ ಆರೋಗ್ಯದ ಮೇಲೆ ಯಾವುದೇ ಸಕ್ರಿಯ ನಿಗಾದ ಅಗತ್ಯವಿಲ್ಲ ಎಂದು ವರದಿ ಬಂದಿದ್ದು, ಈ ಸಂದರ್ಭ ಸಚಿವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಂಕಶಾಲಾದ ಇ.ಡಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿಬೊನ್ ಕುಮಾರ್ ಸಾಧು ಅವರು, 10 ದಿನ ಇ.ಡಿ ಕಸ್ಟಡಿಗೆ ಒಪ್ಪಿಸಿದ್ದಾರೆ.

ಇನ್ನು ಇಬ್ಬರೂ ಆರೋಪಿಗಳನ್ನು ಪ್ರತೀ 48 ಗಂಟೆಗೊಮ್ಮೆ ತಪಾಸಣೆ ನಡೆಸಬೇಕು ಮತ್ತು ತನಿಖಾಧಿಕಾರಿಗಳು ಅವರಿಗೆ ಕಿರುಕುಳ ನೀಡಬಾರದು ಎಂದೂ ಸೂಚಿಸಿದೆ.

ಇದನ್ನೂ ಓದಿ : ಮಂಗಳೂರು: ಪಬ್ ಮೇಲೆ ಭಜರಂಗದಳ ದಾಳಿ ಪ್ರಕರಣ ; ಪಬ್ ಮ್ಯಾನೇಜರ್ ಮತ್ತು ಸಿಬ್ಬಂದಿ ಪೊಲೀಸ್ ವಶಕ್ಕೆ – Vishwanews24 

Leave a Reply