ಶಿರೂರು ಗುಡ್ಡ ಕುಸಿತ ಪ್ರಕರಣ : ಬಾಲಕಿ ಸಹಿತ ಇಬ್ಬರ ಮೃತದೇಹ ಪತ್ತೆ ; ಮೃತರ ಸಂಖ್ಯೆ ಆರಕ್ಕೆ ಏರಿಕೆ – vishwanews24
ಶಿರೂರು ಗುಡ್ಡ ಕುಸಿತ ಪ್ರಕರಣ : ಬಾಲಕಿ ಸಹಿತ ಇಬ್ಬರ ಮೃತದೇಹ ಪತ್ತೆ ; ಮೃತರ ಸಂಖ್ಯೆ ಆರಕ್ಕೆ ಏರಿಕೆ
ಕಾರವಾರ:ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟವರ ಪೈಕಿ ಮತ್ತೆ ಇಬ್ಬರ ಮೃತ ದೇಹಗಳು ಗುರುವಾರ ಪತ್ತೆಯಾಗಿವೆ. ದುರಂತದಲ್ಲಿ ಮೃತರ ಸಂಖ್ಯೆ ಆರಕ್ಕೆ ಏರಿದೆ.
ಬಾಲಕಿಯ ಮೃತದೇಹ ಗೋಕರ್ಣ ಸಮೀಪ ಗಂಗೆಕೊಳ್ಳ ಸಮುದ್ರ ತೀರದಲ್ಲಿ ದೊರೆತಿದೆ. ತಾಲೂಕಿನ ಮಂಜಗುಣಿ ಬಳಿ ಪುರುಷನೋರ್ವನ ಮೃತ ದೇಹ ಪತ್ತೆಯಾಗಿದೆ ಈತ ಲಾರಿ ಚಾಲಕ ಇರಬಹುದು ಎಂದು ಅಂದಾಜಿಸಲಾಗಿದೆ.
ಉಡುಪಿ: ರೈಲ್ವೆ ಸೇತುವೆ ಬಳಿ ಯುವಕನ ಶವ ಪತ್ತೆ ; ಆತ್ಮಹತ್ಯೆ ಶಂಕೆ – vishwanews24
ಆವಂತಿಕಾ (6) ಮೃತ ದೇಹ ಪತ್ತೆಯಿಂದಾಗಿ ಲಕ್ಷ್ಮಣ ನಾಯ್ಕ ಕುಟುಂಬದ ನಾಲ್ವರ ಮೃತ ದೇಹಗಳು ಪತ್ತೆ ಆದಂತಾಗಿದೆ. ಇನ್ನೂ ಕೆಲವರು ಕಣ್ಮರೆಯಾಗಿರುವ ಶಂಕೆ ಇರುವ ಹಿನ್ನೆಲೆಯಲ್ಲಿ ಶೋಧ ಕಾರ್ಯ ಮುಂದುವರೆಸಲಾಗಿದೆ.
ಎನ್.ಡಿ.ಆರ್.ಎಫ್ ತಂಡದ ಸದಸ್ಯರು ಕಳೆದ ಎರಡು ದಿನಗಳಿಂದಲೂ ಕಣ್ಮರೆಯಾರುವವರಿಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸಗಡಗೇರಿ ಸಮೀಪದಲ್ಲಿ ನದಿಯಲ್ಲಿ ಸಿಲುಕಿರುವ ಗ್ಯಾಸ್ ಟ್ಯಾಂಕರ್ ಅನ್ನು ನದಿಯಲ್ಲಿಯೇ ಖಾಲಿ ಮಾಡುವ ಕ್ರಮಕೈಗೊಳ್ಳಲಾಗುತ್ತಿದೆ.
