ಶಿರೂರು ಮಠದ 31ನೇಯ ನೂತನ ಉತ್ತರಾಧಿಕಾರಿಯಾಗಿ ಅನಿರುದ್ದ ನೇಮಕ -Vishwanews24
ಶಿರೂರು ಮಠದ 31ನೇಯ ನೂತನ ಉತ್ತರಾಧಿಕಾರಿಯಾಗಿ ಅನಿರುದ್ದ ನೇಮಕ -Vishwanews24
ಮೇ 11- 13ರ ವರೆಗೆ ಶಿರಸಿ ಬಳಿಯ ಸೋಂದಾದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮ
ಉಡುಪಿ: 16 ವರ್ಷ ವಯಸ್ಸಿನ ಅನಿರುದ್ದ ಎಂಬವರನ್ನು ಉಡುಪಿ ಅಷ್ಠ ಮಠಗಳಲ್ಲೊಂದಾದ ಶಿರೂರು ಮಠದ 31 ನೇಯ ಪೀಠಾಧಿಪತಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಸೋದೆ ಮಠದ ಸ್ವಾಮೀಜಿ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದರು.
ಅವರು ಮಂಗಳವಾರ ಹಿರಿಯಡ್ಕ ಬಳಿಯ ಶಿರೂರು ಮೂಲ ಮಠದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘‘ ಸನ್ಯಾಸ ದೀಕ್ಷೆ, ವೇದಾಂತ ಸಾಮ್ರಾಜ್ಯದ ಪಟ್ಟಾಭಿಷೇಕಕ್ಕೆ ಸಂಬಂಧಿಸಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಶಿರಸಿ ಬಳಿಯ ಸೋಂದಾದಲ್ಲಿ ಮೇ 11 ರಂದು ಆರಂಭಗೊಳ್ಳಲಿದ್ದು, ಮೇ14 ರಂದು ದೀಕ್ಷೆ, ಪಟ್ಟಾಭಿಷೇಕ ನಡೆಯಲಿದೆ,’’ ಎಂದು ತಿಳಿಸಿದರು.
ಮಹಾರಾಷ್ಟ್ರ : ಆಕ್ಸಿಜನ್ ಟ್ಯಾಂಕ್ ಸೋರಿಕೆ ; 22 ಕೊವಿಡ್ ರೋಗಿಗಳ ದುರ್ಮರಣ -Vishwanews24
ಮೂಲತಃ ಧರ್ಮಸ್ಥಳದ ಪ್ರಸ್ತುತ ಉಡುಪಿಯಲ್ಲಿ ವಾಸ್ತವ್ಯ ಹೊಂದಿರುವ ಉದಯ ಸರಳಾತ್ತಾಯ ಮತ್ತು ಶ್ರೀ ವಿದ್ಯಾ ದಂಪತಿಗಳ ಪುತ್ರರಾಗಿರುವ ಅನಿರುದ್ದ ತನ್ನ ಹತ್ತನೇ ತರಗತಿಯ ವಿದ್ಯಾಭ್ಯಾಸವನ್ನು ಪೊರೈಸಿದ್ದಾರೆ. ಅನಿರುದ್ದ್ ಕಿರಿಯ ವಯಸ್ಸಿನಿಂದಲೂ ದೇವರು ಹಾಗೂ ಧಾರ್ಮಿಕ ಚುಟುವಟಿಕೆಗಳಲ್ಲಿ ಆಸಕ್ತಿ ಉಳ್ಳವನಾಗಿದ್ದು ಮಠ ಸಂಪ್ರದಾಯಗಳ ಆಚರಣೆ ಹಾಗೂ ವಿಧಿ ವಿಧಾನಗಳ ಬಗ್ಗೆ ಪರಿಯವಿದ್ದು ವೇದಾಂತ ಶಾಸ್ತ್ರಗಳ ಸಾರವನ್ನು ಅರಿಯುವ ಮನಃ ಉಳ್ಳವನಾಗಿದ್ದು ತಾನೇ ಸ್ವತಃ ಶಿರೂರು ಮಠಕ್ಕೆ ಯತಿಯಾಗಿ ತೆರಳುವೆನೆಂದು ತನ್ನ ಅಭಿಪ್ರಾಯವನ್ನು ತನ್ನ ತಂದೆಯ ಬಳಿ ವ್ಯಕ್ತಪಡಿಸಿದ್ದಾನೆ. ಈ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಂಡು ಸರಳತ್ತಾಯರು ಆತನ ಜಾತಕವನ್ನು ವಿಮರ್ಸಿಸಿ ಪ್ರಶ್ನೆಗಳನ್ನು ಹಾಕಿ ಚಿಂತಿಸಿದಾಗ ಆತನಿಗೆ ಪೀಠಾಧಿಪತ್ಯ ಯೋಗವಿದೆ ಎಂದು ತಿಳಿಯಿತು ಎಂದು ತಿಳಿಸಿದರು.
ಈ ವಿಚಾರ ಕುರಿತು ತಾನು ವಟುವಿನ ಹಿನ್ನಲೆ, ಗುಣ, ಜ್ಞಾನ, ಆಸಕ್ತಿ ಹಾಗೂ ಜಾತಕಎಲ್ಲವನ್ನೂ ಪ್ರತ್ಯಕ್ಷ-ಪರೋಕ್ಷವಾಗಿ ಪರಿಶೀಲನೆ ಮಾಡಿದಾಗ ಎಲ್ಲಾ ಪರೀಕ್ಷೆಯಲ್ಲಿ ಅನಿರುದ್ದನು ಸಮಂಜಸವಾಗಿ ಕಂಡುಬಂದಿದ್ದು ಶೀರೂರು ಮಠದ ಪೀಠಾಧಿಪತಿಯಾಗಿ ಸನ್ಯಾಸ ದೀಕ್ಷೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಲಸಿಕೆ ತಂತ್ರವು ನೋಟ್ ಬ್ಯಾನ್‌ಗಿಂತ ಕಡಿಮೆಯೇನಿಲ್ಲ : ರಾಹುಲ್ ಗಾಂಧಿ -Vishwanews24
