ಶಿರ್ವ ಗ್ರಾ.ಪಂ. ಉಪ ಚುನಾವಣೆ : ಬಿಜೆಪಿ ಬೆಂಬಲಿತ ಅಭ್ಯರ್ಥಿ ನ್ಯಾರ್ಮ ಶ್ರೀನಿವಾಸ ಶೆಣೈ ಗೆಲುವು -Vishwanews24
ಶಿರ್ವ ಗ್ರಾ.ಪಂ. ಉಪ ಚುನಾವಣೆ : ಬಿಜೆಪಿ ಬೆಂಬಲಿತ ಅಭ್ಯರ್ಥಿ ನ್ಯಾರ್ಮ ಶ್ರೀನಿವಾಸ ಶೆಣೈ ಗೆಲುವು -Vishwanews24
ಶಿರ್ವ: ಶಿರ್ವ ಗ್ರಾ.ಪಂ.ನ ಅಧ್ಯಕ್ಷರಾಗಿದ್ದ ದಿ|ಗ್ರೆಗೋರಿ ಕೊನ್ರಾಡ್ ಕ್ಯಾಸ್ರಲಿನೋ ಅವರ ನಿಧನದಿಂದ ತೆರವಾಗಿದ್ದ ಗ್ರಾ.ಪಂ.ನ 12 ನೇ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ನ್ಯಾರ್ಮ ಶ್ರೀನಿವಾಸ ಶೆಣೈ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಲ್ಯಾನ್ಸಿ ಕೋರ್ಡಾ ಅವರ ವಿರುದ್ಧ 92 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಡಾನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಶೇ. 70.89 ಮತ ಚಲಾವಣೆಯಾಗಿದ್ದು, ಶ್ರೀನಿವಾಸ ಶೆಣೈ 421 ಮತ ಗಳಿಸಿ, ಲ್ಯಾನ್ಸಿ ಕೋರ್ಡಾ 329 ಮತ ಗಳಿಸಿದ್ದಾರೆ. 10 ಮತಗಳು ತಿರಸೃತಗೊಂಡಿವೆ.
ಬುಧವಾರ ಶಿರ್ವ ಪೇಟೆಯಲ್ಲಿ ವಿಜಯಿ ಅಭ್ಯರ್ಥಿ ಶ್ರೀನಿವಾಸ ಶೆಣೈ, ಮತ್ತವರ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಈ ಸಮಯದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಪ್ರ. ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಮತ್ತು ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯರು,ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ಓದಿ : ನಾನು ಎಂಟು ಅತ್ಯುನ್ನತ ಬ್ರಾಹ್ಮಣ ಗೋತ್ರಗಳಲ್ಲಿ ಒಂದಾದ ‘ಶಾಂಡಿಲ್ಯ ಗೋತ್ರದವಳು : ಮಮತಾ ಬ್ಯಾನರ್ಜಿ -Vishwanews24
