ಶಿರ್ವ: ಮೆಸ್ಕಾಂ ವಾಹನದಿಂದ ಕಾರಿನ ಮೇಲೆ ಬಿದ್ದ ವಿದ್ಯುತ್ ಕಂಬ – Vishwanews24

Featured, ಉಡುಪಿ

ಶಿರ್ವ: ಮೆಸ್ಕಾಂ ವಾಹನದಿಂದ ಕಾರಿನ ಮೇಲೆ ಬಿದ್ದ ವಿದ್ಯುತ್ ಕಂಬ ; ಪಾರಾದ ಚಾಲಕ

ಉಡುಪಿ: ಟ್ರಾನ್ಸ್ ಫಾರ್ಮರ್ ಬದಲಾವಣೆಗಾಗಿ ಕೊಂಡೊಯ್ಯುತ್ತಿದ್ದ ವೇಳೆ ಮೆಸ್ಕಾಂ ವಾಹನದಲ್ಲಿದ್ದ ವಿದ್ಯುತ್ ಕಂಬ ರಿಡ್ಜ್ ಕಾರೊಂದರ ಮೇಲೆ ಬಿದ್ದ ಘಟನೆ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯಾರ್ಮದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.

ಮಾತಿನಲ್ಲಿ ಹಿಡಿತವಿರಲಿ,ಪರರನ್ನು ಅಗೌರವಿಸಬೇಡಿ..ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಮಂಗಳವಾರ ಬೆಳಿಗ್ಗೆ ಸುಮಾರು 12 ಮಂದಿ ಮೆಸ್ಕಾಂ ಸಿಬಂದಿಗಳು ಹೊಸ ಟ್ರಾನ್ಸ್ ಫಾರ್ಮರ್ ಹಾಕುವ ಸಲುವಾಗಿ ಕೊಂಡೊಯ್ಯುತ್ತಿದ್ದ ವೇಳೆ ಮಸೀದಿ ರಸ್ತೆಯಿಂದ ಶಿರ್ವ ಕಡೆಗೆ ವೇಗವಾಗಿ ಬರುತ್ತಿದ್ದ ರಿಡ್ಜ್ ಕಾರಿನ ಮೇಲೆ ಮೆಸ್ಕಾಂ ವಾಹನದಲ್ಲಿದ್ದ ಕಂಬವು ಆಕಸ್ಮಿಕವಾಗಿ ಬಿದ್ದು ಸಂಪೂರ್ಣ ಜಖಂಗೊಂಡಿದೆ. ಘಟನೆಯಲ್ಲಿ ಮೆಸ್ಕಾಂ ಸಿಬಂದಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯಿಂದ ಹಲವು ಸಮಯದ ವರೆಗೆ ವಾಹನ ಸಂಚಾರಕ್ಕೆ ತಡೆ ಉಂಟಾಗಿದ್ದು, ಸ್ಥಳೀಯರು ಮತ್ತು ಶಿರ್ವ ಪೋಲಿಸರು ಆಗಮಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟರು.

15 ದಿನಗಳ ಒಳಗೆ ಸುರತ್ಕಲ್‌ ಟೋಲ್‌ ಗೇಟ್ ತೆರವು : ಕೇಂದ್ರ ಸಚಿವ ಗಡ್ಕರಿ ಭರವಸೆ – Vishwanews24

Leave a Reply