ಶಿರ್ವ : ಹೊನ್ನಾವರದಲ್ಲಿ ಕಾರು ಹಾಗೂ ಕಂಟೈನರ್ ನಡುವೆ ಢಿಕ್ಕಿ – ಬಂಟಕಲ್‌ ತಾಂತ್ರಿಕ ಕಾಲೇಜಿನ ಪ್ರಾಧ್ಯಾಪಕ ಸ್ಥಳದಲ್ಲೇ ಸಾವು – Vishwanews24

Featured, ಉಡುಪಿ

ಶಿರ್ವ : ಹೊನ್ನಾವರದಲ್ಲಿ ಕಾರು ಹಾಗೂ ಕಂಟೈನರ್ ನಡುವೆ ಢಿಕ್ಕಿ – ಬಂಟಕಲ್‌ ತಾಂತ್ರಿಕ ಕಾಲೇಜಿನ ಪ್ರಾಧ್ಯಾಪಕ ಸ್ಥಳದಲ್ಲೇ ಸಾವು

ಶಿರ್ವ: ಹೊನ್ನಾವರದಲ್ಲಿ ಕಾರು ಹಾಗೂ ಕಂಟೈನರ್ ನಡುವೆ ಢಿಕ್ಕಿ ಸಂಭವಿಸಿ ಬಂಟಕಲ್ಲು ಶ್ರಿ ಮಧ್ವ ವಾದಿರಾಜ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್‌ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕರೊಬ್ಬರು ಸಾವನ್ನಪ್ಪಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಹಿರಿಯ ಸಹಾಯಕ ಪ್ರಾಧ್ಯಾಪಕ ಅನಂತೇಶ ರಾವ್‌ (40) ಮೃತಪಟ್ಟವರು. ಅನಂತೇಶ ರಾವ್ ಅವರು ಸೋದೆ ಮೂಲ ಮಠಕ್ಕೆ ಉಡುಪಿಯಿಂದ ತೆರಳುತ್ತಿದ್ದರು. ಈ ವೇಳೆ ಹೊನ್ನಾವರ ಬಳಿ ಅವರ ಕಾರು ಕಂಟೈನರ್‌ಗೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾಪು : 2028ರಲ್ಲಿ ಮಧ್ವ ಯುನಿವರ್ಸಿಟಿ ಘೋಷಣೆಯ ಗುರಿ : ಕಾರ್ಯದರ್ಶಿ ರತ್ನಕುಮಾರ್ ಎಮ್ :vishwanews24

ಮಂಗಳೂರಿನಲ್ಲಿ ವಾಸವಾಗಿದ್ದ ಅನಂತೇಶ ರಾವ್ ಅವರು ಪತ್ನಿ ಮಂಗಳೂರು ಎಂ.ವಿ. ಶೆಟ್ಟಿ ಎಲೈಡ್‌ ಹೆಲ್ತ್‌ ಸೈನ್ಸಸ್‌ ಕಾಲೇಜಿನ ಪ್ರಾಂಶುಪಾಲೆ ಶ್ರೀಪ್ರಿಯಾ ಅನಂತೇಶ್‌ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.

ಇನ್ನು ಮೃತರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಕಾರ್ಯದರ್ಶಿ ರತ್ನಕುಮಾರ್‌, ಪ್ರಾಂಶುಪಾಲ ಡಾ| ತಿರುಮಲೇಶ್ವರ ಭಟ್‌, ಉಪ ಪ್ರಾಂಶುಪಾಲ ಡಾ| ಗಣೇಶ್‌ ಐತಾಳ್‌ ಸಂತಾಪ ಸೂಚಿಸಿದ್ದಾರೆ.

ಕಾಪು : 2028ರಲ್ಲಿ ಮಧ್ವ ಯುನಿವರ್ಸಿಟಿ ಘೋಷಣೆಯ ಗುರಿ : ಕಾರ್ಯದರ್ಶಿ ರತ್ನಕುಮಾರ್ ಎಮ್ :vishwanews24

Leave a Reply