ಶೀಘ್ರದಲ್ಲೇ ಬೆಂಗಳೂರು – ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ : ರೈಲ್ವೇ ಸಚಿವ ಪಿಯುಷ್ ಗೋಯಲ್ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರು : ಮಂಗಳೂರು ಹಾಗೂ ಬೆಂಗಳೂರು ನಡುವೆ ಪ್ರಯಾಣಕ್ಕೆ ಹೊಸ ’ವಂದೇ ಮಾತರಂ’ ರೈಲು ಆರಂಭಿಸಲಾಗುವುದು ಎಂದು ರೈಲ್ವೇ ಸಚಿವ ಪಿಯುಷ್ ಗೋಯಲ್ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವರು ’ವಂದೇ ಮಾತರಂ’ ಸೆಮಿ ಹೈಸ್ಪೀಡ್ ವಿಭಾಗಕ್ಕೆ ಒಳಪಟ್ಟಿದ್ದು ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ತಯಾರಿಸಲ್ಪಟ್ಟದ್ದಾಗಿದೆ. ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಈ ರೈಲು ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿದೆ.

”ಇದು ಸ್ವದೇಶಿ ತಂತ್ರಜ್ಞಾನದಡಿ ಅಭಿವೃದ್ಧಿಯಾಗಿರುವ ಹೈ ಸ್ಪೀಡ್‌ ಟ್ರೈನ್‌ ಆಗಿದೆ” ಎಂದು ರೈಲ್ವೆ ಸಚಿವರು ತಿಳಿಸಿದರು. ಜತೆಗೆ, ”ಈ ರೈಲ್ವೆ ಮಾರ್ಗಗಳಲ್ಲಿ ಶೀಘ್ರದಲ್ಲೇ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗುವುದು” ಎಂದು ಪಿಯೂಶ್‌ ಗೋಯಲ್‌ ಮಾಹಿತಿ ನೀಡಿದರು.

“ಮೊದಲ ಬಾರಿಗೆ ಮಂಗಳೂರು-ಬೆಂಗಳೂರು-ಚೆನ್ನೈ ಹಾಗೂ ಮಂಗಳೂರು- ಹೈದರಬಾದ್ ನಗರಗಳನ್ನು ಸಂಪರ್ಕಿಸುವ ವಂದೇ ಮಾತರಂ ರೈಲು ಪ್ರಯಾಣಿಕರಿಗೆ ಹೆಚ್ಚಿನ ಉಪಕಾರಿಯಾಗಲಿದೆ. ಈ ಹೊರತು ಮುಂದಿನ ಆರು ತಿಂಗಳುಗಳಲ್ಲಿ ದೇಶದ ಹೆಚ್ಚಿನ ರೈಲು ನಿಲ್ದಾನಗಳಲ್ಲಿ ವೈ ಫೈ ಸೌಲಭ್ಯ ನೀಡಲಾಗುವುದು” ಎಂದು ಅವರು ಹೇಳಿದರು..